Breaking News

ಉಗ್ರ ಸಂಘನೆಗಳೊಂದಿಗೆ ನಂಟು ಆರೋಪ: ಕಲಬುರಗಿಯಲ್ಲಿ ಶಂಕಿತ ವ್ಯಕ್ತಿ ವಶಕ್ಕೆ

ಕಲಬುರಗಿಯಲ್ಲಿ ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್‌ವುಲ್ ಮಲೀಕ್ ಎಂಬಾತನನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರಾಫ್ ಬಜಾರ್‌ನಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ಈತ, ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು, ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಬೀದರ್‌ನಲ್ಲಿ ವಿಶಾಲ್ ಮೇತ್ರೆ ಹಾಗೂ ದಾವಣಗೆರೆಯಲ್ಲಿ ಸುಹೇಲ್ ಎಂಬಾತನನ್ನು ಉಗ್ರರ ಸಂಪರ್ಕದ ಶಂಕೆಯಡಿ ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Share News

About BigTv News

Check Also

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೆಂಗಳೂರಿನಲ್ಲಿ 30 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಜಪ್ತಿ

ಬೆಂಗಳೂರು: ಸಿಸಿಬಿ ಹಾಗೂ ಉಪ್ಪಾರಪೇಟೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒಟ್ಟು ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ಜಪ್ತಿ …

Leave a Reply

Your email address will not be published. Required fields are marked *