ಬೆಂಗಳೂರು: ಕೆಎಎಸ್ ಪಾಸ್ ಆಗಿದ್ದೇನೆಂದು ಸುಳ್ಳು ಹೇಳಿ ಶರಣ್ಯಳನ್ನು ಮದುವೆಯಾಗಿದ್ದ ಮಂಜುನಾಥ್, ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಮನನೊಂದು ಶರಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೊಮ್ಮಗಳನ್ನು ನೋಡಲು ಬಂದ ಶರಣ್ಯ ತಾಯಿ ಕವಿತಾ ಮೇಲೂ ಮಂಜುನಾಥ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಯಲಹಂಕ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶರಣ್ಯಳ ಇ-ಮೇಲ್ನಲ್ಲಿ ಪತಿಯ ಕಿರುಕುಳ ಹಾಗೂ ಬೆದರಿಕೆಯ ವಿವರಗಳು ಪತ್ತೆಯಾಗಿವೆ ಎನ್ನಲಾಗಿದೆ. ಮಗಳ ಸಾವಿನ ಮರುತನಿಖೆಗೆ ತಾಯಿ ಕವಿತಾ ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
