Breaking News

ಬಾಗಲಕೋಟೆಯಲ್ಲಿ ಭೀಕರ ಮರ್ಡರ್ : ನವರಾತ್ರಿ ದುರ್ಗಾ ಪೂಜೆ ವಿಚಾರಕ್ಕೆ ಕಿರಿಕ್, ಚಾಕು ಇರಿದು ಯುವಕನ ಬರ್ಬರ ಹತ್ಯೆ!

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ವಿನಾಯಕ ನಗರದಲ್ಲಿ ದುರ್ಗಾ ಪೂಜೆ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಿತಿನ್ ನಿಂಬಾಳ್ಕರ್ (25) ಕೊಲೆಯಾದ ಯುವಕ. ದಾಂಡಿಯ ನೃತ್ಯದ ಬಳಿಕ ನಡೆಯುತ್ತಿದ್ದ ಪೂಜೆ ವೇಳೆ ಮದ್ಯದ ಅಮಲಿನಲ್ಲಿ ಬಂದ ಶ್ರೀನಿವಾಸ ಕದರಿ, ನಿತಿನ್ ಜೊತೆ ಜಗಳವಾಡಿದ್ದಾನೆ. ಬಳಿಕ ಸ್ನೇಹಿತರೊಂದಿಗೆ ಮರಳಿ ಬಂದು ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ನಿತಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಸಂಜು ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share News

About BigTv News

Check Also

ಬಾಲಕನ ಹತ್ಯೆ ಪ್ರಕರಣ: ಅಪ್ರಾಪ್ತರಿಬ್ಬರ ಬಂಧನ

ಬೆಂಗಳೂರು: ವಿಭೂತಿಪುರ ಕೆರೆಯ ಬಳಿ 13 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಎಚ್‌ಎಎಲ್ ಠಾಣೆ …

Leave a Reply

Your email address will not be published. Required fields are marked *