Breaking News

ವಿಧಾನಸೌಧ ಸ್ಫೋಟಿಸಿದಂತೆ ಎಐ ವಿಡಿಯೋ ಪೋಸ್ಟ್ – ಬಿಹಾರದ ಯುವಕ ಅರೆಸ್ಟ್‌!

ಬೆಂಗಳೂರು: AI ಬಳಸಿ ವಿಧಾನಸೌಧವನ್ನು ಸ್ಫೋಟಿಸಿದಂತೆ ನಕಲಿ ರೀಲ್ಸ್ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಬಿಹಾರ ಮೂಲದ ಹಜರತ್ ಅಲಿ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಜೆ.ಸಿ. ರಸ್ತೆಯ ಪೈಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ವಿಧಾನಸೌಧದ ಮುಂದೆ ತೆಗೆದಿದ್ದ ತನ್ನ ಫೋಟೋಗಳಿಗೆ ಸ್ಫೋಟದ ದೃಶ್ಯಗಳನ್ನು ಸೇರಿಸಿ ನಕಲಿ ವಿಡಿಯೋ ತಯಾರಿಸಿದ್ದ. ರೀಲ್ಸ್ ವೈರಲ್ ಆದ ಬಳಿಕ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೃತ್ಯದ ಹಿಂದಿನ ಉದ್ದೇಶದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಕುಚಿಕು ಗೆಳೆಯನನ್ನೇ ಬರ್ಬರವಾಗಿ ಕೊಂದು ಆತನ ಮನೆಯಲ್ಲೇ ಉಪ್ಪಿಟ್ಟು ತಿಂದ ಪಾಪಿ!

ಗದಗ: ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಕಡಲೆ ಮಾರಾಟದ ಹಣದ ವಿಚಾರವಾಗಿ ಗೆಳೆಯನನ್ನೇ ಕೊಡಲಿಯಿಂದ ಕೊಲೆ ಮಾಡಿದ ಘಟನೆ ಬೆಳಕಿಗೆ …

Leave a Reply

Your email address will not be published. Required fields are marked *