Breaking News

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio

ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ ಬಲಿ…

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಅವರು ಪ್ರಾಣ ಕಳೆದುಕೊಂಡಿದ್ದಾರೆ….

ಮೃತ ಮಹಿಳೆಯನ್ನು ಹುಬ್ಬಳ್ಳಿಯ ಭರತ್ ನಗರದ ನಿವಾಸಿ ವಿದ್ಯಾ ಮಂಜುನಾಥ ಗೌಡರ (38) ಎಂದು ಗುರುತಿಸಲಾಗಿದೆ. ಇವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು…

ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ವಿದ್ಯಾ ಅವರು ಮನೆಯಿಂದ ಲ್ಯಾಬ್‌ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ, ಶಿವಶಂಕರ ಕಾಲೋನಿ ಬಳಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಗಾಳಿಪಟದ ಮಾಂಜಾ ದಾರ ಅವರ ಕುತ್ತಿಗೆಗೆ ಸಿಲುಕಿದ್ದು, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ….

ಮಾಂಜಾ ದಾರಕ್ಕೆ ಬಲಿಯಾದ ಜೀವ.. ಹೊಣೆ ಹೊರುವರು ಯಾರು…?

ಗಾಳಿಪಟದ ಸಂಭ್ರಮಕ್ಕೆ ಬಳಸುವ ಅಪಾಯಕಾರಿ ಮಾಂಜಾ ದಾರ ಇದೀಗ ಮಹಿಳೆಯೊಬ್ಬರ ಜೀವವನ್ನೇ ಬಲಿ ಪಡೆದಿದೆ. ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಇಂತಹ ದಾರಗಳು ಮಾರಕವಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ…

ಅಪಾಯಕಾರಿ ಮಾಂಜಾ ದಾರದ ಬಳಕೆ ಮತ್ತು ಮಾರಾಟದ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಮತ್ತೊಂದು ಅಮಾಯಕ ಜೀವ ಬಲಿಯಾಗುವ ಮುನ್ನವೇ ಇಂತಹ ಅಪಾಯಕ್ಕೆ ಕಡಿವಾಣ ಹಾಕಬೇಕಿದೆ….

ಘಟನೆಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ….

Share News

About Shaikh BigTv

Check Also

ಕುಚಿಕು ಗೆಳೆಯನನ್ನೇ ಬರ್ಬರವಾಗಿ ಕೊಂದು ಆತನ ಮನೆಯಲ್ಲೇ ಉಪ್ಪಿಟ್ಟು ತಿಂದ ಪಾಪಿ!

ಗದಗ: ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಕಡಲೆ ಮಾರಾಟದ ಹಣದ ವಿಚಾರವಾಗಿ ಗೆಳೆಯನನ್ನೇ ಕೊಡಲಿಯಿಂದ ಕೊಲೆ ಮಾಡಿದ ಘಟನೆ ಬೆಳಕಿಗೆ …

Leave a Reply

Your email address will not be published. Required fields are marked *