ಮುಂಬೈ: ಸ್ವಾಮಿನಾಥನ್ ವರದಿ ಜಾರಿಗೆ ತರೋದಾಗಿ ಕೇಂದ್ರ ಕೃಷಿ ಇಲಾಖೆ ನನಗೆ ಲಿಖಿತವಾಗಿ ಭರವಸೆ ನೀಡದಿದ್ದಲ್ಲಿ ಮೌನ ವ್ರತ ಮಾಡೋದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ಎಚ್ಚರಿಸಿದ್ದಾರೆ. ಲೋಕ್ಪಾಲ್ ಮತ್ತು ಸ್ವಾಮಿನಾಥನ್ ವರದಿ ಜಾರಿಗೆ ತರಬೇಕೆಂದು ಆಗ್ರಹಿಸಿ ಅಣ್ಣ ಹಜಾರೆ ಜ.30ರಿಂದ ಫೆ.5 ರ ತನಕ ಉಪವಾಸ ಸತ್ಯಾಗ್ರಹ ಮಾಡಿದ್ರು. ಇನ್ನು ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರ ಹಜಾರೆ ಬೇಡಿಕೆ ಪೂರೈಸುವುದಾಗಿ ಭರವಸೆ ನೀಡಿತ್ತು. ಆದ್ರೆ ಈವರೆಗೆ ಕೇಂದ್ರ ಕೃಷಿ ಇಲಾಖೆಯಿಂದ ಸ್ವಾಮಿನಾಥನ್ ವರದಿ ಕುರಿತಾಗಿ ಯಾವುದೇ ಲಿಖಿತ ಸಂದೇಶ ಬಂದಿಲ್ಲ ಎಂದು ಅಣ್ಣ ಹಜಾರೆ ಅಕ್ರೋಶ ವ್ಯಕ್ತಪಡಿಸಿದ್ದು, ಮೌನ ವ್ರತ ಕೈಗೊಳ್ಳೋದಾಗಿ ಎಚ್ಚರಿಸಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





