Breaking News

ಶಿಗ್ಗಾವಿ: ಬಡ್ಡಿ ಹಣ ನೀಡದ ಕಾರಣ ವ್ಯಕ್ತಿ ಅಪಹರಿಸಿ ಚಿತ್ರಹಿಂಸೆ

ಬಂಕಾಪುರ: ಸಾಲದ ಬಡ್ಡಿ ಹಣ ಪಾವತಿಸದ ಕಾರಣಕ್ಕೆ ಮಣಿಕಂಠ ಮಾಲತೇಶ ಹಳವಳ್ಳಿ (29) ಎಂಬ ಯುವಕನನ್ನು ಅಪಹರಿಸಿ ನಾಲ್ಕು ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಅಕ್ಟೋಬರ್ 16ರಂದು ಬೇಕರಿ ಕೆಲಸಕ್ಕೆ ತೆರಳುತ್ತಿದ್ದ ಮಣಿಕಂಠ ಅವರನ್ನು ಆರೋಪಿಗಳು ಅಡ್ಡಗಟ್ಟಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಕೈಕಾಲು ಕಟ್ಟಿ ಹಲ್ಲೆ ನಡೆಸಿ, ನಾಲ್ಕು ದಿನ ಅನ್ನ-ನೀರು ನೀಡದೆ ಸಿಗರೇಟ್‌ನಿಂದ ದೇಹದ ಹಲವು ಕಡೆ ಸುಟ್ಟು ಹಿಂಸಿಸಿದ್ದಾರೆ ಎಂದು ದೂರಲಾಗಿದೆ. ಅಕ್ಟೋಬರ್ 20ರಂದು ಪೊದೆಯ ಬಳಿ ಬಿದ್ದಿದ್ದ ಮಣಿಕಂಠ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾದಿ ಹಾಗೂ ಸುನೀಲ್ ಕತ್ತಿ ವಿರುದ್ಧ ಬಂಕಾಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಸಂತ್ರಸ್ತನಿಗೆ ನ್ಯಾಯ ಒದಗಿಸುವಂತೆ ಬಿಜೆಪಿ ಮುಖಂಡ ಭೋಜರಾಜ ಕರೂದಿ ಆಗ್ರಹಿಸಿದ್ದಾರೆ.

Share News

About BigTv News

Check Also

ನೈಟ್ ಶಿಫ್ಟ್ಗೆ ಬರಲ್ಲ ಎಂದಿದ್ದಕ್ಕೆ ಪಿಜ್ಜಾ ಮಳಿಗೆಯಲ್ಲಿ ರಂಪಾಟ! ಮ್ಯಾನೇಜರ್ ಬೈಕ್ ಗೆ ಬೆಂಕಿ ಹಚ್ಚಿದ ಡೆಲಿವರಿ ಬಾಯ್ಸ್!

ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದಕ್ಕೆ ಇಬ್ಬರು ಡೆಲಿವರಿ ಬಾಯ್ಸ್ ಪಿಜ್ಜಾ ಮಳಿಗೆಯಲ್ಲಿ ದಾಂಧಲೆ ನಡೆಸಿದ ಘಟನೆ ವರ್ತೂರಿನ …

Leave a Reply

Your email address will not be published. Required fields are marked *