ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದಕ್ಕೆ ಇಬ್ಬರು ಡೆಲಿವರಿ ಬಾಯ್ಸ್ ಪಿಜ್ಜಾ ಮಳಿಗೆಯಲ್ಲಿ ದಾಂಧಲೆ ನಡೆಸಿದ ಘಟನೆ ವರ್ತೂರಿನ ಮೋಜೋ ಪಿಜ್ಜಾ ಮಳಿಗೆಯಲ್ಲಿ ನಡೆದಿದೆ. ಸುಮನ್ ಕುಮಾರ್ ನಾಯಕ್ ಮತ್ತು ಜಿಬ್‌ಕಾಂತ್ ಪೋದ್ದಾರ್ ವಿರುದ್ಧ ಆರೋಪ ಕೇಳಿಬಂದಿದೆ. ನೈಟ್ ಶಿಫ್ಟ್ ವಿಚಾರವಾಗಿ ಮ್ಯಾನೇಜರ್ ಸತೀಶ್ ಕುಮಾರ್ ಜೊತೆ ಜಗಳವಾಡಿದ ಇಬ್ಬರು, ಬಳಿಕ ಮದ್ಯ ಸೇವಿಸಿ ಮರಳಿ ಬಂದು ಮಳಿಗೆಯ ಎರಡು ಎಲ್‌ಇಡಿ ಪರದೆಗಳನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಲ್ಲದೆ, ಮ್ಯಾನೇಜರ್ ಬೈಕ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
