Breaking News

ಸೆಕ್ಯುರಿಟಿ ಗಾರ್ಡ್‌ ಹತ್ಯೆಗೆ ಐಇಡಿ ಸ್ಫೋಟ!

ಬೆಂಗಳೂರು: ಪುಲಕೇಶಿನಗರದ ಜರ್ಮಯ್ಯ ರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಐಇಡಿ ಸ್ಫೋಟ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ ಅಲ್ಲಾವುದ್ದೀನ್ ಹತ್ಯೆಗೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಸ್ಫೋಟ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಾವುದ್ದೀನ್‌ನ ಅಣ್ಣನ ಮಗ ಜಾಹಿದುಲ್ ಹುಸೇನ್, ಆಸ್ತಿ ಹಾಗೂ ವೈಯಕ್ತಿಕ ದ್ವೇಷದಿಂದ ಬಾಲ್ಯ ಸ್ನೇಹಿತರ ಜತೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ರಾಯಚೂರಿನ ಮಸ್ಕಿಯಲ್ಲಿ ಬಾಂಬ್ ತಯಾರಿಸಿ ಪಾರ್ಸೆಲ್ ರೂಪದಲ್ಲಿ ಅಲ್ಲಾವುದ್ದೀನ್‌ಗೆ ತಲುಪಿಸಲಾಗಿತ್ತು. ಸಹೋದ್ಯೋಗಿ ಸೂರಜ್ ಬಾಕ್ಸ್ ತೆರೆದಾಗ ಸ್ಫೋಟಗೊಂಡು ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಅಸ್ಸಾಂ ಮೂಲದ ಜಾಹಿದುಲ್ ಹುಸೇನ್, ಬುರ್ಹಾನ್ ಅಹ್ಮದ್ ಹಾಗೂ ಸಾಜಿದುಲ್ಲಾ ಲಷ್ಕರ್‌ನನ್ನು ಬಂಧಿಸಲಾಗಿದೆ. ಸುಮಾರು 1,500 ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದ ವಿಶೇಷ ಪೊಲೀಸ್ ತಂಡಕ್ಕೆ ₹3 ಲಕ್ಷ ಬಹುಮಾನ ಘೋಷಿಸಲಾಗಿದೆ.

Share News

About BigTv News

Check Also

ನೈಟ್ ಶಿಫ್ಟ್ಗೆ ಬರಲ್ಲ ಎಂದಿದ್ದಕ್ಕೆ ಪಿಜ್ಜಾ ಮಳಿಗೆಯಲ್ಲಿ ರಂಪಾಟ! ಮ್ಯಾನೇಜರ್ ಬೈಕ್ ಗೆ ಬೆಂಕಿ ಹಚ್ಚಿದ ಡೆಲಿವರಿ ಬಾಯ್ಸ್!

ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದಕ್ಕೆ ಇಬ್ಬರು ಡೆಲಿವರಿ ಬಾಯ್ಸ್ ಪಿಜ್ಜಾ ಮಳಿಗೆಯಲ್ಲಿ ದಾಂಧಲೆ ನಡೆಸಿದ ಘಟನೆ ವರ್ತೂರಿನ …

Leave a Reply

Your email address will not be published. Required fields are marked *