ಬೆಂಗಳೂರು: ಹಿಂದೂ ಯುವತಿಯನ್ನು ಮದುವೆ ಯಾಗಿ ಹೆಣ್ಣು ಮಗು ಹುಟ್ಟಿದ್ದ ಬಳಿಕ ಪರಾರಿಯಾಗಿರುವ ಅನ್ಯ ಕೋಮಿನ ಯುವಕನ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಿಟಿಎಂ ಲೇಔಟ್ ನಿವಾಸಿ ಸೈಯದ್ ಇಮ್ತಿಯಾಜ್ ವಿರುದ್ಧ ಕೊಲ್ಕೋತ್ತಾ ಮೂಲದ ಮಹಿಳೆ ದೂರು ನೀಡಿದ್ದು, ಆರೋಪಿ ಪರಾರಿಯಾಗಿದ್ದಾನೆ.ಆತನಿ ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣದ ಮೂಲಕ ಕೊಲ್ಕೋತ್ತಾ ಮೂಲದ ಹಿಂದೂ ಯುವತಿಯನ್ನು ಪರಿಚಯಿಸಿ ಕೊಂಡ ಸೈಯದ್ ಇಮ್ತಿಯಾಜ್, ಬಳಿಕ ಆಕೆಯನ್ನು ಪ್ರೀತಿಸಿ 2025ರ ಜುಲೈ 18ರಂದು ಇಬ್ಬರೂ ರಿಜಿಸ್ಟರ್ ಮದುವೆ ಆಗಿದ್ದಾರೆ. ಬಳಿಕ ತನ್ನ ಧರ್ಮಕ್ಕೆ ಮತಾಂತರ ಮಾಡಿದ್ದು, ಹೊಸ ಹೆಸರನ್ನು ಇಟ್ಟಿದ್ದಾನೆ. ಬಳಿಕ ಪಶ್ಚಿಮ ಬಂಗಾಳದಲ್ಲೇ ಮಹಿಳೆ ಜತೆ ವಾಸವಾಗಿದ್ದ. ಕೆಲ ದಿನಗಳ ಹಿಂದಷ್ಟೇ ಮಹಿಳೆಗೆ ಹೆಣ್ಣು ಮಗು ಹುಟ್ಟಿದೆ. ಆಗ ಕೊಲ್ಕೋತ್ತಾದಲ್ಲಿ ತಾಯಿ ಮಗುವನ್ನು ಬಿಟ್ಟು ಸೈಯದ್ ಪರಾರಿಯಾಗಿ ದ್ದಾನೆ. ಆತನ ವಿರುದ್ಧ ಮಹಿಳೆ ವಕೀಲರ ಮೂಲಕ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

