Breaking News

ಚಿತ್ರದುರ್ಗ : ಮಗನ ಮೇಲಿನ ಹಲ್ಲೆಗೆ ಸೇಡು; ಯುವಕನ ಅಪಹರಿಸಿ ಕೊಲೆಗೈದು ಶವ ಹೂತಿಟ್ಟ ಮೂವರ ಬಂಧನ

ಚಿತ್ರದುರ್ಗ: ಮಗನ ಕಣ್ಣಿಗೆ ಹಲ್ಲೆ ಮಾಡಿದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗುರುಕಿರಣ್ ಎಂಬ ಯುವಕನನ್ನು ಅಪಹರಿಸಿ ಕೊಲೆ ಮಾಡಿ ಶವ ಹೂತು ಹಾಕಿದ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 2023ರಲ್ಲಿ ಗುರುಕಿರಣ್ ಹಾಗೂ ರಮೇಶ್ ಮಗ ಗೋಪಿ ನಡುವೆ ಗಲಾಟೆ ನಡೆದಿದ್ದು, ಗೋಪಿಯ ಬಲಗಣ್ಣಿಗೆ ಗಂಭೀರ ಗಾಯವಾಗಿತ್ತು. ಇದೇ ದ್ವೇಷದಿಂದ ರಮೇಶ್ ತನ್ನ ಸಂಬಂಧಿಕರಾದ ವಿರೂಪಾಕ್ಷ ಮತ್ತು ಸೋಮಶೇಖರ್ ಜೊತೆ ಸೇರಿ ಗುರುಕಿರಣ್‌ನನ್ನು ಆಟೋದಲ್ಲಿ ಅಪಹರಿಸಿ, ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದ ಆರೋಪವಿದೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಹೂತು ಹಾಕಲಾಗಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಕೋಟೆ ಠಾಣೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

Share News

About BigTv News

Check Also

ಹೆಲ್ತ್ ಇನ್ಶೂರೆನ್ಸ್‌ ಪ್ರೀಮಿಯಂ ಪಾವತಿ ನೆಪ : ಮಹಿಳೆಗೆ 2.68 ಲಕ್ಷ ರೂ. ವಂಚನೆ

ಮಂಗಳೂರು: ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟುವ ನೆಪದಲ್ಲಿ 42 ವರ್ಷದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ₹2.68 ಲಕ್ಷ ವಂಚಿಸಿರುವ ಘಟನೆ …

Leave a Reply

Your email address will not be published. Required fields are marked *