Breaking News

ಕೇಂದ್ರ ಸರ್ಕಾರ ರಾಷ್ಟ್ರೀಯ ವಕ್ಸ್‌ ಬೋರ್ಡ್ ತಿದ್ದುಪಡಿ ತರಲು ಚಿಂತನೆ ನಡೆಸಿದೆ : ತೇಜಸ್ವಿ ಸೂರ್ಯ

ಹುಬ್ಬಳ್ಳಿ : ಕೇಂದ್ರ ಸರ್ಕಾರ ರಾಷ್ಟ್ರೀಯ ವಕ್ಸ್‌ ಬೋರ್ಡ್ ತಿದ್ದುಪಡಿ ತರಲು ಚಿಂತನೆ ನಡೆಸಿದೆ. ಹೀಗಾಗಿ ಸಂಸದೀಯ ಜಂಟಿ ಕಮೀಟಿ ಅಧ್ಯಕ್ಷರು ರಾಜ್ಯಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುತ್ತಿದ್ದಾರೆ. ರಾಜ್ಯದಲ್ಲಿ ವಕ್ಸ್ ಬೋರ್ಡ್ ಆಟೋಪಗಳನ್ನು ಅಧ್ಯಯನ ಮಾಡುವ ಸಲುವಾಗಿ ಕಮೀಟಿ ರಾಜ್ಯಕ್ಕೆ ಬಂದಿದೆಂದು ಹುಬ್ಬಳ್ಳಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಹುಬ್ಬಳ್ಳಿಯಲ್ಲಿ 1000 ಜನ ರೈತರು ದೂರು ಕೊಟ್ಟಿದ್ದಾರೆ. 70 ಅಧಿಕ ಮುಖಂಡರು ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ವಿಜಯಪುರ, ಬೆಳಗಾವಿ ಹೋಗಿ ಅಲ್ಲಿ ಸಹ ರೈತರ ಮನವಿ ಸ್ವೀಕಾರ ಮಾಡಿದೆ. ಬಳಿಕ ವರದಿ ತಯಾರಿಸಿ ದೆಹಲಿಗೆ ತೆರಳುತ್ತೆವೆ ಎಂದರು.

ಇನ್ನು ಸಚಿವ ಜಮೀರ್ ಅಹ್ಮದ್ ಅಧಿಕಾರ, ಕಾನೂನು ಬಗ್ಗೆ ಮಾತನಾಡುವುದನ್ನು ಬಿಡಬೇಕು. ಅವರು ಮಾಡಿದ ಕೆಲಸದಿಂದಲೇ ರಾಜ್ಯದ ರೈತರಿಗೆ ಈ ಪರಿಸ್ಥಿತಿ ಬಂದಿದೆ. ಜಮೀ‌ರ್ ಕಾನೂನು ಬಗ್ಗೆ ಮಾತನಾಡುವುದು ಭೂತದ ಬಾಯಿಯಲ್ಲಿ ಭಗವದ್ಗೀತೆ ಹೇಳಿದಂತೆ ಎಂದರು.

Share News

About Shaikh BigTv

Check Also

ಹುಬ್ಬಳ್ಳಿ. ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ನಿರಸ ಪ್ರತಿಕ್ರಿಯೆ

ಕನ್ನಡ ಪರ ಹೋರಾಟಗಾರ ವಾಟನಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲ. …

Leave a Reply

Your email address will not be published. Required fields are marked *