ಮಹೇಶ್ ಬಾಮೈದನಿಗೆ ಮೊಬೈಲ್ ಮತ್ತು ಹಣ ತೆಗೆದುಕೊಂಡು ಹೋಗಿರುವ ಬಗ್ಗೆ ದೂರವಾಣಿ ಕರೆ ಮಾಡಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಸಂಬಂಧ ಗಂಡ ಮಹೇಶ್ ಹೆಂಡತಿ ಸುಶೀಲ ರವರ ಜೊತೆ ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣ ಮತ್ತು ಮೊಬೈಲ್ ಅನು ನಿನ್ನ ತಮ್ಮ ತೆಗೆದುಕೊಂಡು ಹೋಗಿದ್ದಾನೆ ಎಂದು ಜಗಳವಾಡಿದ್ದಾನೆ. ಇದರಿಂದ ಬೇಸತ್ತ ಸುಶೀಲ ತನ್ನ ಇಬ್ಬರು ಮಕ್ಕಳ ಜೊತೆ ಭಾನುವಾರ ರಾತ್ರಿ ಮನೆಯಿಂದ ತೆರಳಿ ಕಾಡುಹೊಲ ಸಮೀಪದಲ್ಲಿನ ಜಮೀನೊಂದರ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸೋಮವಾರದಂದು ಜಮೀನಿನ ಮಾಲೀಕ ಬಾವಿಯಲ್ಲಿ ನೀರು ತರಲು ತೆರಳಿದಾಗ ಬಾವಿಯ ಬಳಿ ಚಪ್ಪಲಿ ತಾಳಿ ಹಾಗೂ ಇನ್ನಿತರ ವಸ್ತುಗಳು ಕಂಡು ಬಂದಿದೆ. ತಕ್ಷಣ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ಸಹಕಾರದಿಂದ ಬಾವಿಯಲ್ಲಿ ಮುಳುಗಿದ್ದ ಮೂವರನ್ನು ಮೇಲೆತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

