Breaking News

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ ಮಾಡಿದ ಆರೋಪದಡಿ ಮಾಜಿ ಸಹಾಯಕ ಆಯುಕ್ತೆ ಹಾಗೂ ಕೆಎಎಸ್ ಅಧಿಕಾರಿ ದುರ್ಗಾಶ್ರೀ ವಿರುದ್ಧ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದುರ್ಗಾಶ್ರೀ ಅವರು ತಮ್ಮ ಅಧಿಕಾರಾವಧಿಯಲ್ಲಿ 87 ಸರ್ವೆ ನಂಬರ್‌ಗಳಿಗೆ ಸೇರಿದ ಒಟ್ಟು 68 ಎಕರೆ 35 ಗುಂಟೆ ಜಮೀನಿನ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಕುರಿತು ಲೋಕಾಯುಕ್ತ ಇಲಾಖೆಯೂ ಈ ಹಿಂದೆ ಸ್ವಯಂಪ್ರೇರಿತ ತನಿಖೆ ಕೈಗೊಂಡಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹಾಲಿ ಎಸಿ ಮಂಜುನಾಥ್ ದೂರು ಸಲ್ಲಿಸಿದ್ದು, ಪೊಲೀಸರು ಬಿಎನ್‌ಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ದಾವಣಗೆರೆಯಲ್ಲಿ ಗಾಂಜಾ ದಂಧೆಗೆ ಖಾಕಿ ಶಾಕ್..! ನಾಲ್ವರು ಅರೆಸ್ಟ್, 2.5 ಕೆಜಿ ಗಾಂಜಾ ಸೀಜ್!

ಗಾಂಜಾ ದಂಧೆಕೋರರಿಗೆ ಆಜಾದ್ ನಗರ ಪೊಲೀಸರ ಬೇಟೆ..! ₹1.25 ಲಕ್ಷದ ಮಾಲು ವಶ, ಎರಡು ಬೈಕ್ ಜಪ್ತಿ! ದಾವಣಗೆರೆಯಲ್ಲಿ ಗಾಂಜಾ …

Leave a Reply

Your email address will not be published. Required fields are marked *