Breaking News

ಗ್ರಾಪಂ ಸದಸ್ಯನ ಕೊಚ್ವಿ ಕೊಲೆ ಪ್ರಕರಣ : ನಾಲ್ವರು ಆರೋಪಿಗಳು ಪೋಲಿಸ್ ವಶಕ್ಕೆ!

ಹುಬ್ಬಳ್ಳಿ : ಕೌಟುಂಬಿಕ ಹಳೆಯ ದ್ವೇಷದ ಹಿನ್ನೆಲೆ ರಾಯನಾಳ ಗ್ರಾಪಂ ಸದಸ್ಯನನ್ನು ಕೊಲೆ ಮಾಡಿದ್ದ ಘಟನೆಗೆ ಸಂಬಂಧಿಸಿ ಹಳೇಹುಬ್ಬಳ್ಳಿ ಪೊಲೀಸರು ಬುಧವಾರ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ‌ ರಾಯನಾಳ ಗ್ರಾಪಂ ಸದಸ್ಯ ಗಂಗಿವಾಳ ಗ್ರಾಮದ ದೀಪಕ ಶಿವಾಜಿ ಪಟದಾರಿ ( 30 ) ಅವರನ್ನು ಸೋಮವಾರ ರಾತ್ರಿ ರಾಯನಾಳದಲ್ಲಿ 6 ರಿಂದ 8 ಜನರ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.ಈ ಕುರಿತು ಹತ್ಯೆಯಾದ ದೀಪಕನ ಸಹೋದರ ಹಳೇಹುಬ್ಬಳ್ಳಿ ಠಾಣೆಯಲ್ಲಿ ಮೇಟಿ ಕುಟುಂಬದ ಸದಸ್ಯರು ಸೇರಿದಂತೆ ಕೆಲವರ ಮೇಲೆ ದೂರು ದಾಖಲಿಸಿದ್ದರು.ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ವಶಕ್ಕೆ ಪಡೆದಿದ್ದು , ಇನ್ನು ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *