Breaking News

ಅ. ೧೪ ರಂದು ರಾಜ್ಯಾದ್ಯಂತ ಮರ್ಡರ್ ಮಿಸ್ಟ್ರಿಯ ಸಿನಿಮಾ ಬಿಡುಗಡೆ

ಹುಬ್ಬಳ್ಳಿ : ಮರ್ಡರ್ ಮಿಸ್ಟ್ರಿಯ ಕಥಾ ಹಂದರ ಹೊಂದಿರುವ 3.0 ಸಿನಿಮಾ ಅಕ್ಟೋಬರ್ ೧೪ ರಂದು ರಾಜ್ಯಾದ್ಯಂತ ಬೆಳ್ಳಿ ತೆರೆಗೆ ಬರಲಿದೆ ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3.0 ಚಲನಚಿತ್ರವು ಮೂವರು ಯುವಕರು ಹಾಗೂ ಯುವತಿಯೋರ್ವಳ ಸುತ್ತ ನಡೆಯುವ ಕ್ರೈಂ, ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಒಂದು ಹಾಡು ಒಳಗೊಂಡಿದೆ ಎಂದರು.

ಶಶಿಕಿರಣ್, ಶಿವರಾಜ್ ಹಾಗೂ ಲೋಹಿತ್ ಈ ಚಿತ್ರದ ಮೂವರು ನಾಯಕರಾಗಿ ನಟಿಸಿದ್ದು, ಚಾರ್ಲ್ಸ್‌ ಹೆನ್ರಿ ನಿರ್ಮಾಣದಲ್ಲಿ ಸಾಥ ನೀಡಿದ್ದು, ಚಿತ್ರದ ನಾಯಕಿಯಾಗಿ ನಿಶ್ಕಲ್ ನಟಿಸಿದ್ದಾರೆ. ಈ ಸಿನಿಮಾ ರಾಜ್ಯಾದ್ಯಂತ ಸುಮಾರು ೧೫೦ ಚಿತ್ರ ಮಂದಿರದಲ್ಲಿ ತೆರೆ ಕಾಣಲಿದ್ದು, ಮೂವರ ನಾಯಕರ ಚೊಚ್ಚಲ ಚಿತ್ರ ಇದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಟರಾದ ಶಿವರಾಜ್, ಶಶಿಕಿರಣ್, ಲೋಹಿತ್ ಉಪಸ್ಥಿತರಿದ್ದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *