Breaking News

ರೋಡ್ ರೇಜ್; ಮಹಿಳೆಗೆ ನಿಂದಿಸಿ ಕಾರು ಜಖಂಗೊಳಿಸಿದ್ದ ಕಿಡಿಗೇಡಿಗಳ ಬಂಧನ!-

ಬೆಂಗಳೂರು: ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ವಿಚಾರವಾಗಿ ಪ್ರಶ್ನಿಸಿದ ಮಹಿಳೆಯ ಕಾರಿನ ಗಾಜು ಒಡೆದು, ಕಲ್ಲಿನಿಂದ ಹಾನಿಗೊಳಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 28ರಂದು ಮಹಿಳೆಯ ಕಾರಿಗೆ ಮೂವರು ಯುವಕರಿದ್ದ ಬೈಕ್ ಡಿಕ್ಕಿ ಹೊಡೆದಿತ್ತು. ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಹೇಳಿದ್ದಕ್ಕೆ ಕೋಪಗೊಂಡ ಯುವಕರು ಮಹಿಳೆಯೊಂದಿಗೆ ಜಗಳವಾಡಿ, ಹೆಲ್ಮೆಟ್ ಹಾಗೂ ಕಲ್ಲಿನಿಂದ ಕಾರಿನ ಗಾಜು, ಬಾನೆಟ್ ಮತ್ತು ರಿಯರ್ ವ್ಯೂ ಮಿರರ್ ಜಖಂಗೊಳಿಸಿದ್ದಾರೆ. ಇದರಿಂದ ₹15ರಿಂದ ₹20 ಸಾವಿರ ನಷ್ಟವಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಹಾಗೂ ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Share News

About BigTv News

Check Also

ಆನ್‌ಲೈನ್ ಟ್ರೇಡಿಂಗ್ ಸಾಲಕ್ಕೆ ದೊಡ್ಡಮ್ಮನ ಸರ ಕದ್ದ ಯುವಕ 6 ಗಂಟೆಯಲ್ಲೇ ಸೆರೆ!

ಮೈಸೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದ ಯುವಕನೊಬ್ಬ, ಸ್ವಂತ ದೊಡ್ಡಮ್ಮನ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ …

Leave a Reply

Your email address will not be published. Required fields are marked *