Breaking News

ಪ್ರೇಯಸಿಯ ಹತ್ಯೆಗೈದ ಪ್ರಿಯಕರ: ಗೋಕಾಕ್ ಫಾಲ್ಸ್ ಬಳಿ ಮೃತದೇಹ ಎಸೆದು ಪರಾರಿ; ಪ್ರಕರಣ ದಾಖಲು

ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷ ಪ್ರೀತಿಸಿದ ಯುವಕ, ಮದುವೆಗೆ ಒತ್ತಾಯಿಸಿದ ಪ್ರೇಯಸಿಯನ್ನೇ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಯಬಾಗ ತಾಲೂಕಿನ ಹಾರುಗೇರಿ ಗ್ರಾಮದ ರಕ್ಷಿತಾ ಸಾರಿಕರ್ (25) ಕೊಲೆಯಾದ ಯುವತಿ. ಬಸಪ್ಪ ಸಿದ್ದಪ್ಪ ಸಾತನ್ನವಣ್ಣ ಕೊಲೆ ಆರೋಪಿ. ಅಕ್ಟೋಬರ್ 28ರಂದು ರಕ್ಷಿತಾಳನ್ನು ಗೋಕಾಕ್ ಫಾಲ್ಸ್‌ಗೆ ಕರೆದುಕೊಂಡು ಹೋದ ಬಸಪ್ಪ, ಮದುವೆ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳದ ವೇಳೆ ಆಕೆಯ ಕುತ್ತಿಗೆ ಹಿಸುಕಿ ಹಾಗೂ ವೇಲಿನಿಂದ ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಫಾಲ್ಸ್‌ನ ಗುಡ್ಡದ ಇಳಿಜಾರಿನ ಮುಳ್ಳಿನ ಪೊದೆಗಳಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಈ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *