Breaking News

ಒಂದು ಕೋಟಿ ಹಣ ಕೊಟ್ರೆ 1.30 ಕೋಟಿ ಟ್ರಾನ್ಸ್‌ ಫರ್‌ ಆಮಿಷ – ದರೋಡೆ ಮಾಡಿದ್ದ ಗ್ಯಾಂಗ್‌ ನಲ್ಲಿ ರಮೇಶ್‌ ಜಾರಕಿಹೊಳಿ ಗನ್‌ ಮೆನ್‌!

ಬೆಳಗಾವಿ: ಒಂದು ಕೋಟಿ ರೂ. ನೀಡಿದರೆ ಬ್ಯಾಂಕ್ ಖಾತೆಗೆ 1.30 ಕೋಟಿ ರೂ. ಜಮೆ ಮಾಡುವುದಾಗಿ ಆಮಿಷವೊಡ್ಡಿ ₹2.68 ಕೋಟಿ ದರೋಡೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮಾಜಿ ಗನ್‌ಮ್ಯಾನ್ ಕೂಡ ಇದ್ದಾನೆ ಎನ್ನಲಾಗಿದೆ. ಐವರಿಂದ ಒಟ್ಟು ₹2.68 ಕೋಟಿ ಸಂಗ್ರಹಿಸಿದ್ದ ಆರೋಪಿಗಳು, ಅ. 30ರಂದು ಮೂಡಲಗಿಯಲ್ಲಿ ಹಣ ಎಣಿಸುವ ನೆಪದಲ್ಲಿ ಶೆಡ್‌ಗೆ ಕರೆಸಿಕೊಂಡಿದ್ದರು. ಬಳಿಕ ಕಣ್ಣಿಗೆ ಖಾರದಪುಡಿ ಎರಚಿ, ಹಲ್ಲೆ ನಡೆಸಿ ಐದು ಬ್ಯಾಗ್‌ಗಳಲ್ಲಿದ್ದ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಭೇದಿಸಿದ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ ₹2.39 ಕೋಟಿ ನಗದು, ಎರಡು ಬೈಕ್ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೈಕ್‌ಗೆ ಕಾರು ತಗುಲಿದ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ: 3 ಜನ ಸೆರೆ

ಬೆಂಗಳೂರು: ಬೈಕ್‌ಗೆ ಕಾರು ತಗುಲಿದ ವಿಚಾರಕ್ಕೆ ಮಹಿಳೆಯೊಂದಿಗೆ ಗಲಾಟೆ ನಡೆಸಿ, ಹೆಲ್ಮೆಟ್‌ನಿಂದ ಕಾರು ಜಖಂಗೊಳಿಸಿದ ಮೂವರು ಆರೋಪಿಗಳನ್ನು ಕೋರಮಂಗಲ ಪೊಲೀಸರು …

Leave a Reply

Your email address will not be published. Required fields are marked *