Breaking News

ಬೆಂಗಳೂರಲ್ಲಿ ಭೀಕರ ಕೊಲೆ : ಮನೇಲಿ ಕೆಲಸಗಾರನ ಜತೆ ಏಕಾಂತದಲ್ಲಿದ್ದ ಮಗಳು : ಕೋಪದಲ್ಲಿ ಕೆಲಸಗಾರನ ಕೊಂದ ತಂದೆ!

ಬೆಂಗಳೂರು: ಮಗಳೊಂದಿಗೆ ಏಕಾಂತದಲ್ಲಿದ್ದ ಕೆಲಸಗಾರನನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಗಿಲು ನಿವಾಸಿ ಕಿರಣ್ (23) ಕೊಲೆಯಾದ ಯುವಕ. ಆರೋಪಿ ತಂದೆ ಆನಂದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ್ ಬಳಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ಆತನ ಮಗಳ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಇಬ್ಬರೂ ಮನೆಯಲ್ಲಿದ್ದಾಗ ದಿಢೀರನೆ ಬಂದ ಆನಂದ್, ಮಗಳನ್ನು ಸಂಬಂಧಿಕರ ಮನೆಗೆ ಕಳುಹಿಸಿ ಕಿರಣ್‌ನನ್ನು ಕೊಠಡಿಯಲ್ಲಿ ಕೂಡಿಹಾಕಿ ಬ್ಯಾಟ್ ಹಾಗೂ ಪೈಪ್‌ಗಳಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಕಿರಣ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಆಸ್ಪತ್ರೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆನಂದ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಬೈಕ್‌ಗೆ ಕಾರು ತಗುಲಿದ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ: 3 ಜನ ಸೆರೆ

ಬೆಂಗಳೂರು: ಬೈಕ್‌ಗೆ ಕಾರು ತಗುಲಿದ ವಿಚಾರಕ್ಕೆ ಮಹಿಳೆಯೊಂದಿಗೆ ಗಲಾಟೆ ನಡೆಸಿ, ಹೆಲ್ಮೆಟ್‌ನಿಂದ ಕಾರು ಜಖಂಗೊಳಿಸಿದ ಮೂವರು ಆರೋಪಿಗಳನ್ನು ಕೋರಮಂಗಲ ಪೊಲೀಸರು …

Leave a Reply

Your email address will not be published. Required fields are marked *