Breaking News

ಬೈಕ್‌ಗೆ ಕಾರು ತಗುಲಿದ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ: 3 ಜನ ಸೆರೆ

ಬೆಂಗಳೂರು: ಬೈಕ್‌ಗೆ ಕಾರು ತಗುಲಿದ ವಿಚಾರಕ್ಕೆ ಮಹಿಳೆಯೊಂದಿಗೆ ಗಲಾಟೆ ನಡೆಸಿ, ಹೆಲ್ಮೆಟ್‌ನಿಂದ ಕಾರು ಜಖಂಗೊಳಿಸಿದ ಮೂವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ (20), ಇಸ್ಮಾಯಿಲ್ (21) ಹಾಗೂ ಶಿವಕುಮಾರ್ (22) ಬಂಧಿತರು. ಅ.18ರಂದು ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಮಹಿಳೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಟ್ರಿಪಲ್ ರೈಡಿಂಗ್ ಮಾಡುತ್ತಿದ್ದ ಆರೋಪಿಗಳ ಬೈಕ್‌ಗೆ ಕಾರು ತಗುಲಿದೆ. ಇದರಿಂದ ಕೋಪಗೊಂಡ ಆರೋಪಿಗಳು ಮಹಿಳೆಯೊಂದಿಗೆ ಜಗಳವಾಡಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆಲ್ಮೆಟ್‌ನಿಂದ ಕಾರಿನ ಬಾನೆಟ್‌ಗೆ ಹೊಡೆದು ಗಾಜು ಒಡೆಯಲು ಯತ್ನಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Share News

About BigTv News

Check Also

ಮಗಳ ಜತೆಗೆ ರೂಮ್‌ನಲ್ಲಿ ಸಿಕ್ಕಿಬಿದ್ದ ಕೆಲಸಗಾರನ ಭೀಕರ ಹತ್ಯೆ; ಕಾರ್ನ್ ಕಾರ್ಟ್ ವ್ಯಾಪಾರಿ ಅರೆಸ್ಟ್!

ಬೆಂಗಳೂರು: ಮಗಳೊಂದಿಗೆ ಮನೆಯ ಕೊಠಡಿಯಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಕೆಲಸಗಾರನನ್ನು ಪೈಪ್ ಹಾಗೂ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ …

Leave a Reply

Your email address will not be published. Required fields are marked *