Breaking News

ಲವರ್‌ ಜೊತೆ ಬೆಡ್‌ ಮೇಲೆ ಮಗಳು.. ನೆತ್ತಿಗೇರಿತು ಕಣ್ಣಾರೆ ಕಂಡ ಅಪ್ಪನ ಸಿಟ್ಟು..! ಮುಂದಾಗಿದ್ದು ಮಾತ್ರ ದುರಂತ

ಬೆಂಗಳೂರು: ಮೈಸೂರಿನಲ್ಲಿ ಓದುತ್ತಿದ್ದ ಯುವತಿ, ತನ್ನ ತಂದೆಯ ಬಳಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಕಿರಣ್ (24) ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ರಜೆಗೆ ಮನೆಗೆ ಬಂದಿದ್ದ ಯುವತಿ, ತಂದೆ-ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಿರಣ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ತಮಿಳುನಾಡಿಗೆ ಹೋಗುವುದಾಗಿ ಹೇಳಿ ಪತ್ನಿಯೊಂದಿಗೆ ಹೊರಟಿದ್ದ ತಂದೆ ಆನಂದ್ ಕೆಲವೇ ಗಂಟೆಗಳಲ್ಲಿ ವಾಪಸ್ ಬಂದಾಗ ಇಬ್ಬರೂ ಒಂದೇ ಕೊಠಡಿಯಲ್ಲಿರುವುದನ್ನು ಕಂಡು ಆಕ್ರೋಶಗೊಂಡಿದ್ದಾನೆ. ಮಗಳನ್ನು ಸಂಬಂಧಿಕರ ಮನೆಗೆ ಕಳುಹಿಸಿ, ಕಿರಣ್‌ಗೆ ಬ್ಯಾಟ್ ಹಾಗೂ ಪೈಪ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಕಿರಣ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಯಲಹಂಕ ಪೊಲೀಸರು ತಂದೆ ಆನಂದ್‌ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಮಗಳ ಜತೆಗೆ ರೂಮ್‌ನಲ್ಲಿ ಸಿಕ್ಕಿಬಿದ್ದ ಕೆಲಸಗಾರನ ಭೀಕರ ಹತ್ಯೆ; ಕಾರ್ನ್ ಕಾರ್ಟ್ ವ್ಯಾಪಾರಿ ಅರೆಸ್ಟ್!

ಬೆಂಗಳೂರು: ಮಗಳೊಂದಿಗೆ ಮನೆಯ ಕೊಠಡಿಯಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಕೆಲಸಗಾರನನ್ನು ಪೈಪ್ ಹಾಗೂ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ …

Leave a Reply

Your email address will not be published. Required fields are marked *