Breaking News

ರಕ್ಷಣಾ ಉಪಕರಣಗಳ ರಫ್ತಿನಲ್ಲಿ ಹೊಸ ದಾಖಲೆ ನಿರ್ಮಿಸಿದ ಭಾರತ

ನವದೆಹಲಿ: ಇಂಡೋ ಪೆಸಿಫಿಕ್‌ನಲ್ಲಿ ಪ್ರಮುಖ ರಾಷ್ಟ್ರವಾದ ಭಾರತ ಎರಡು ಶತ್ರುಗಳ ರಾಷ್ಟ್ರಗಳ ಜೊತೆ ಗಡಿಭಾಗವನ್ನು ಹಂಚಿಕೊಂಡಿದ್ದು, ಹಾಗಾಗಿ ರಕ್ಷಣಾ ವಿಚಾರದಲ್ಲಿ ಭಾರತವು ಹೆಚ್ಚಿನ ಶಕ್ತಿಯಾಗಿ ಹೊರಹೊಮ್ಮುವುದು ಸದ್ಯದ ಅತ್ಯಗತ್ಯವಾಗಿದೆ. ಈಗಾಗಲೇ ಪಾಕಿಸ್ತಾನ ಹಾಗೂ ಚೀನಾ ಜೊತೆ ಯುದ್ದ ನಡೆಸಿರುವ ಭಾರತವು ಸದ್ಯ ಪಾಶ್ಚಿಮಾತ್ಯ ದೇಶಗಳ ಅಚ್ಚುಮೆಚ್ಚಿನ ರಾಷ್ಟ್ರವಾಗಿದ್ದರೂ ರಕ್ಷಣಾ ಕ್ಷೇತ್ರದಲ್ಲಿ ಭಾರತವು ಇತರೆ ರಾಷ್ಟ್ರಗಳನ್ನು ಅವಲಂಬಿಸುವುದನ್ನು ಕಡಿಮೆ ಮಾಡಬೇಕಿದೆ.
ಒಂದು ಕಾಲದಲ್ಲಿ ರಕ್ಷಣಾ ವಿಚಾರದಲ್ಲಿ ಬಹುತೇಕ ಎಲ್ಲಾ ವಸ್ತುಗಳನ್ನು ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು ಸಮಯ ಬದಲಾಗಿದ್ದು, ಹೆಚ್ಚಿನ ವಸ್ತುಗಳನ್ನು ನಾವು ದೇಶದಲ್ಲೇ ತಯಾರು ಮಾಡಿಕೊಳ್ಳುತ್ತಿದ್ದೇವೆ. ಆದರೂ ರಕ್ಷಣಾ ಉಪಕರಣಗಳ ಆಮದು ವಿಚಾರದಲ್ಲಿ ಭಾರತ ಈಗಲೂ ರಶ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದರೆ ತಪ್ಪಾಗಲಾರದು.
ಇನ್ನು ಸದ್ಯ ರಕ್ಷಣಾ ವಿಚಾರದಲ್ಲಿ ಭಾರತದ ನೀತಿ ಸಂಪೂರ್ಣ ಬದಲಾವಣೆ ಕಂಡಿದ್ದು, ನಮಗೆ ಬೇಕಾದ ಉತ್ಪನ್ನಗಳನ್ನು ನಾವು ದೇಶದಲ್ಲೇ ತಯಾರು ಮಾಡುವುದೇ ಅಲ್ಲದೆ ಇತರೆ ದೇಶಗಳಿಗೂ ರಫ್ತು ಮಾಡುವತ್ತ ಚಿತ್ತ ಹರಿಸಿದ್ದೇವೆ. ಇದೇ ಕಾರಣಕ್ಕೆ ದೇಶದಲ್ಲಿ ರಕ್ಷಣಾ ಉಪಕರಣಗಳಿಗೆ ಸಂಬಂಧಿಸಿದ ಕೈಗಾರಿಕಾ ಕಾರಿಡಾರ್‌ಗಳು ಕೂಡ ನಿರ್ಮಾಣವಾಗುತ್ತಿದೆ.
ತಮಿಳುನಾಡು ಹಾಗೂ ಉತ್ತರ ಪ್ರದೇಶಗಳಲ್ಲಿ ಈ ಕಾರಿಡಾರ್‌ಗಳು ನಿರ್ಮಾಣವಾಗುತ್ತಿದೆ. ಅಲ್ದದೆ ಸದ್ಯ ಭಾರತವು ರಕ್ಷಣಾ ಉಪಕರಣಗಳ ವಿಚಾರದಲ್ಲಿ ನಿಧಾನವಾಗಿ ಮೇಲೇಳುತ್ತಿದ್ದು, ಮುಂದೊಂದು ದಿನ ದೊಡ್ಡ ಜಾಗತಿಕ ಶಕ್ತಿಯಾಗಿ ಗುರುತಿಸಿಕೊಳ್ಳುವ ದಿನ ದೂರವಿಲ್ಲ. ಇನ್ನು ಸದ್ಯದ ಹೊಸ ಅಂಕಿಅಂಶಗಳ ಪ್ರಕಾರ ಭಾರತವು ರಕ್ಷಣಾ ಉಪಕರಣಗಳ ರಫ್ತಿನ ವಿಚಾರದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
2023-24ರಲ್ಲಿ ಭಾರತದ ರಕ್ಷಣಾ ಉತ್ಪಾದನೆಯು ದಾಖಲೆಯ ಗರಿಷ್ಠ 1.27 ಲಕ್ಷ ಕೋಟಿ ರೂ.ಗೆ ತಲುಪಿದೆ. ಸದ್ಯ ಭಾರತ ದೇಶವು 90 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಮಿಲಿಟರಿ ಯಂತ್ರಾಂಶವನ್ನು ರಫ್ತು ಮಾಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಎನ್‌ಡಿಎ ಸರ್ಕಾರದ ಅಡಿಯಲ್ಲಿ ಮೇಕ್ ಇನ್ ಇಂಡಿಯಾ ಭಾರತವು ರಕ್ಷಣಾ ಉಪಕರಣಗಳ ರಫ್ತನ್ನು ಹೆಚ್ಚಿಸುವ ಇರಾದೆ ಹೊಂದಿದೆ. ಒಂದು ಕಾಲದಲ್ಲಿ ಸಣ್ಣಪುಟ್ಟ ರಕ್ಷಣಾ ಉಪಪಕರಣಗಳಿಗೂ ವಿದೇಶಗಳತ್ತ ನೋಡುತ್ತಿದ್ದ ಭಾರತ ಇಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *