ಕುಂದಾಪುರದ ಗುಲ್ವಾಡಿ ಗ್ರಾಮದ ಸೌಕೂರಿನಲ್ಲಿ ಪಾರ್ಟ್‌ಟೈಮ್ ಉದ್ಯೋಗದ ಜಾಹೀರಾತು ನಂಬಿದ ಮಹಿಳೆಯೊಬ್ಬರು ಸೈಬರ್ ವಂಚಕರಿಂದ ₹1,86,570 ಕಳೆದುಕೊಂಡಿದ್ದಾರೆ. ರೇಣುಕಾ ಗಣೇಶ ದೇವಾಡಿಗ ಹಣ ಕಳೆದುಕೊಂಡವರು. ಸೆಪ್ಟೆಂಬರ್ 16ರಂದು ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ ಜಾಹೀರಾತು ನೋಡಿ ಕ್ಲಿಕ್ ಮಾಡಿದ ಅವರಿಗೆ ವಂಚಕರು ವಿವಿಧ ಟಾಸ್ಕ್‌ಗಳನ್ನು ನೀಡಿದ್ದಾರೆ. ಆರಂಭದಲ್ಲಿ ₹120 ಹಾಗೂ ₹10,130 ಪಾವತಿಸಿ ವಿಶ್ವಾಸ ಗಳಿಸಿದ್ದಾರೆ. ನಂತರ ಹೆಚ್ಚಿನ ಹಣ ಗಳಿಸುವ ಆಮಿಷವೊಡ್ಡಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
