Breaking News

ಪತಿಯ ಕೊಲೆ ಪ್ರಕರಣ: ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದ ಪತ್ನಿಯೇ ಆರೋಪಿ!; ಇಬ್ಬರ ಬಂಧನ

ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ಕಂಪ್ಯೂಟರ್ ಸೆಂಟರ್ ಮಾಲೀಕ ಸಿದ್ರಾಮ ಬಸಲಿಂಗಪ್ಪ ಮಾಡಗಿ ಪಾಟೀಲ (40) ಅವರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕೊಲೆ ಆರೋಪದಡಿ ಮೃತರ ಪತ್ನಿ ಅಂಬಿಕಾ ಹಾಗೂ ಆಕೆಯ ಪ್ರಿಯಕರ ಎನ್ನಲಾದ ಮಾರುತಿ ಭೋವಿ ಅವರನ್ನು ಬಂಧಿಸಿದ್ದಾರೆ. ನ.3ರಂದು ಸಿದ್ರಾಮ ಅವರು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ತಾಯಿ ಬಸಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದರು. ತಾಯಿಯ ದೂರಿನ ಆಧಾರದ ಮೇಲೆ ಮಳಖೇಡ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Share News

About BigTv News

Check Also

ನಶೆಯಲ್ಲಿದ್ದ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಬೆಂಗಳೂರಿನಲ್ಲಿ ಮದ್ಯದ ನಶೆಯಲ್ಲಿದ್ದ 26 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಸಮೀರ್ ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. …

Leave a Reply

Your email address will not be published. Required fields are marked *