Breaking News

ಹೋಮ್‌ ವರ್ಕ್‌ ಮಾಡಿಲ್ಲವೆಂಬ ನೆಪ – ಪುಟ್ಟ ಬಾಲಕನ ಬಾಯಿಗೆ ಬಟ್ಟಿಕಟ್ಟಿ ಹಲ್ಲೆಗೈದ ಮದರಸಾ ಶಿಕ್ಷಕ!

ರಾಯಚೂರು ಜಿಲ್ಲೆಯ ಕವಿತಾಳದ ಮದರಸಾ ವಸತಿ ಶಾಲೆಯಲ್ಲಿ ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ನಾಲ್ಕನೇ ತರಗತಿಯ ಬಾಲಕನ ಮೇಲೆ ಶಿಕ್ಷಕ ಅಬ್ಬಾಸ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮಗುವಿನ ಬಾಯಿಗೆ ಬಟ್ಟೆ ತುರುಕಿ, ಬೆನ್ನು ಹಾಗೂ ಮುಖಕ್ಕೆ ಮನಬಂದಂತೆ ಹೊಡೆದ ಪರಿಣಾಮ ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಮಗುವಿನ ಸ್ಥಿತಿ ಕಂಡು ಆಕ್ರೋಶಗೊಂಡ ಪೋಷಕರು ಕವಿತಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ ಆರೋಪಿ ಶಿಕ್ಷಕ ಅಬ್ಬಾಸ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಆರ್‌ಟಿಇ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ನಿಷೇಧಿಸಲಾಗಿದೆ. ವಸತಿ ಶಾಲೆಯಲ್ಲೇ ಇಂತಹ ಘಟನೆ ನಡೆದಿರುವುದು ಮಕ್ಕಳ ಸುರಕ್ಷತೆ ಹಾಗೂ ಶಿಕ್ಷಕರ ಹೊಣೆಗಾರಿಕೆ ಬಗ್ಗೆ ಆತಂಕ ಮೂಡಿಸಿದೆ.

Share News

About BigTv News

Check Also

ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ಮಾಡುತ್ತಿದ್ದ ಯುವಕ: ಜೋಳಿಗೆಯಲ್ಲಿ ಸಾವಿರಾರು ರೂ. ಪತ್ತೆ, ಸಾರ್ವಜನಿಕರಿಂದ ಧರ್ಮದೇಟು!

ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ವಿಶೇಷಚೇತನನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ಮಹಾರಾಷ್ಟ್ರ ಮೂಲದ ಸನ್ನಿ ಎಂಬ ಯುವಕನನ್ನು ಸಾರ್ವಜನಿಕರು ಹಿಡಿದಿದ್ದಾರೆ. …

Leave a Reply

Your email address will not be published. Required fields are marked *