Breaking News

ಶಿವಮೊಗ್ಗ: ಯುವತಿಯರ ಮೇಲೆ ಪಟಾಕಿ ಎಸೆದು ರೌಡಿ ಪುಂಡಾಟ; ಎಸ್ಪಿ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ

ಶಿವಮೊಗ್ಗ ನಗರದ ಹೊರವಲಯದ ಹರಿಗೆ ಗ್ರಾಮದಲ್ಲಿ ನಿರಂಜನ್ ಅಲಿಯಾಸ್ ಶಕೆ ಎಂಬ ಪುಡಿ ರೌಡಿ ಹಾಗೂ ಆತನ ಸಹಚರರು ಯುವತಿಯರ ಮೇಲೆ ಪಟಾಕಿ ಎಸೆದು ಪುಂಡಾಟಿಕೆ ನಡೆಸಿದ್ದಾರೆ. ಪಟಾಕಿ ಹೊಡೆಯದಂತೆ ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡ ಆರೋಪಿ, ರಘು ಎಂಬುವವರ ಮನೆಗೆ ರಾಕೆಟ್ ಪಟಾಕಿ ಬಿಟ್ಟಿದ್ದು, ಪಕ್ಕದ ಮನೆಯ ಮಹಿಳೆಯೊಬ್ಬರಿಗೆ ತೀವ್ರ ಗಾಯಗಳಾಗಿವೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಆರೋಪಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಸಂಬಂಧ ನಿರಂಜನ್ ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ಮಾಡುತ್ತಿದ್ದ ಯುವಕ: ಜೋಳಿಗೆಯಲ್ಲಿ ಸಾವಿರಾರು ರೂ. ಪತ್ತೆ, ಸಾರ್ವಜನಿಕರಿಂದ ಧರ್ಮದೇಟು!

ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ವಿಶೇಷಚೇತನನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ಮಹಾರಾಷ್ಟ್ರ ಮೂಲದ ಸನ್ನಿ ಎಂಬ ಯುವಕನನ್ನು ಸಾರ್ವಜನಿಕರು ಹಿಡಿದಿದ್ದಾರೆ. …

Leave a Reply

Your email address will not be published. Required fields are marked *