Breaking News

ಕುಡಿದ ಮತ್ತಿನಲ್ಲಿ ಬೈದಿದ್ದಕ್ಕೆ ತೋಟದ ಕಾವಲುಗಾರನ ಕೊಲೆ ಪ್ರಕರಣ: ಕೊನೆಗೂ ಸಿಕ್ಕಿಬಿದ್ದ ಆರೋಪಿ

ಚಿಕ್ಕಮಗಳೂರು: ಕಡೂರು ತಾಲೂಕಿನ ಕರಿಚಿರನಹಳ್ಳಿ ಸಮೀಪದ ಅಡಿಕೆ ತೋಟದ ಮನೆಯಲ್ಲಿ ಕಾವಲುಗಾರನನ್ನು ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನವೀನ್ ಎಂಬಾತನನ್ನು ಬಂಧಿಸಿದ್ದಾರೆ. ಮೃತನನ್ನು ಹಾಸನ ಜಿಲ್ಲೆಯ 52 ವರ್ಷದ ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಹಿಂದಿನ ವೈಷಮ್ಯದ ಹಿನ್ನೆಲೆಯಲ್ಲಿ ನವೀನ್, ಲಕ್ಷ್ಮಣ್ ಇದ್ದ ತೋಟದ ಮನೆಗೆ ತೆರಳಿದ್ದ. ಇಬ್ಬರೂ ಮದ್ಯ ಸೇವಿಸಿದ ವೇಳೆ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ನವೀನ್ ಆಯುಧದಿಂದ ಹಲ್ಲೆ ನಡೆಸಿ ಲಕ್ಷ್ಮಣ್‌ನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಬಳಿಕ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದ. ತನಿಖೆ ನಡೆಸಿದ ಕಡೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share News

About BigTv News

Check Also

ಅಂಡಾಣು ಮಾರಾಟ | ಬಡ ಮಹಿಳೆಯರನ್ನು ಕರೆತಂದು ಅಂಡಾಣು ಸಂಗ್ರಹ ಮಾಡುತ್ತಿದ್ದ ಐವಿಎಫ್ ಹಗರಣ ಬಹಿರಂಗ

ಹೈದರಾಬಾದ್ ಮತ್ತು ಸಿಕಂದರಾಬಾದ್‌ನ ಐದು ಕಡೆಗಳಲ್ಲಿ ಅಕ್ರಮ ಅಂಡಾಣು ಸಂಗ್ರಹ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ 43 ಮಹಿಳೆಯರನ್ನು …

Leave a Reply

Your email address will not be published. Required fields are marked *