ಬಳ್ಳಾರಿಯಲ್ಲಿ ಲಕ್ಷ್ಮಿಪೂಜೆ ಹಾಗೂ ಹಣದ ಆಮಿಷವೊಡ್ಡಿ ಬಡ ಮಹಿಳೆಯರು ಮತ್ತು ಅಪ್ರಾಪ್ತರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುತ್ತಿದ್ದ ಅಂತರರಾಜ್ಯ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಅಕ್ಕಪಡೆಯ ಮೂವರು ಮಹಿಳಾ ಸಿಬ್ಬಂದಿ ತಾಯಿ-ಮಕ್ಕಳ ವೇಷದಲ್ಲಿ 45 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಜಾಲವನ್ನು ಬಯಲಿಗೆಳೆದಿದ್ದಾರೆ. ಆರೋಪಿಗಳು ಲಕ್ಷ್ಮಿಪೂಜೆಯ ನೆಪದಲ್ಲಿ ಯುವತಿಯರನ್ನು ಕರೆಸಿ, ಫೋಟೊ ಮತ್ತು ಅಶ್ಲೀಲ ವಿಡಿಯೊಗಳನ್ನು ಸೆರೆಹಿಡಿದು ಬ್ಲಾಕ್‌ಮೇಲ್ ಮಾಡಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿ, ಮೂವರು ಸಂತ್ರಸ್ತೆಯರನ್ನು ರಕ್ಷಿಸಲಾಗಿದೆ. ಈ ಜಾಲವು ಕರ್ನಾಟಕದ ಹಲವು ಜಿಲ್ಲೆಗಳ ಜೊತೆಗೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೂ ವ್ಯಾಪಿಸಿತ್ತು. ತಲೆಮರೆಸಿಕೊಂಡಿರುವ ಇನ್ನೂ ಐವರು ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
