Breaking News

ಕುಂದಾಪುರ : ದಾಖಲೆ ಕೇಳಿದ ಗೋಡಂಬಿ ಉದ್ಯಮಿಗೆ ಜೀವ ಬೆದರಿಕೆ : ಆಡಿಟರ್ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಗೋಡಂಬಿ ಕಾರ್ಖಾನೆಗೆ ಸಂಬಂಧಿಸಿದ ವೈಯಕ್ತಿಕ ಹಾಗೂ ವ್ಯವಹಾರಿಕ ದಾಖಲೆಗಳನ್ನು ಹಿಂದಿರುಗಿಸುವಂತೆ ಕೇಳಿದ ಉದ್ಯಮಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಆಡಿಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬೈಂದೂರಿನ ಪ್ರಭಾಕರ ಶೆಟ್ಟಿ (46) ಅವರು ಆಶೀರ್ವಾದ ಕ್ಯಾಶ್ಯೂ ಕಾರ್ಖಾನೆಯ ಲೆಕ್ಕಪರಿಶೋಧನೆ ಹಾಗೂ ತೆರಿಗೆ ಸಂಬಂಧಿತ ಕೆಲಸಗಳಿಗಾಗಿ ಎಸ್. ರಮಾನಂದ ಆಚಾರ್ಯ ಅವರನ್ನು ಆಡಿಟರ್ ಆಗಿ ನೇಮಿಸಿದ್ದರು. ಆಡಿಟರ್ ಅಗತ್ಯ ಮಾಹಿತಿಗಳನ್ನು ನೀಡದೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿರುವ ಪ್ರಭಾಕರ ಶೆಟ್ಟಿ, ಸೇವೆ ಸ್ಥಗಿತಗೊಳಿಸಿದ್ದರು. ಆದರೆ ತಮ್ಮ ವೈಯಕ್ತಿಕ ಹಾಗೂ ವ್ಯವಹಾರಿಕ ದಾಖಲೆಗಳನ್ನು ಹಿಂದಿರುಗಿಸುವಂತೆ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

Share News

About BigTv News

Check Also

ಕಡಬದ ವ್ಯಾಪಾರಿಗೆ ಹಣಕ್ಕೆ ಬೇಡಿಕೆ, ಜೀವ ಬೆದರಿಕೆ

ಕಡಬ: ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಆರೋಪದಡಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟ್ರುಪ್ಪಾಡಿ ಗ್ರಾಮದ …

Leave a Reply

Your email address will not be published. Required fields are marked *