Breaking News

ಬೆಂಗಳೂರು | ದಂಪತಿ ನಡುವೆ ಗಲಾಟೆ: ಪತ್ನಿ ಕೊಲೆ, ಪತಿ ಪರಾರಿ

ಬೆಂಗಳೂರು: ಹುಳಿಮಾವು ಜಂಕ್ಷನ್ ಬಳಿಯ ವಠಾರದಲ್ಲಿ ದಂಪತಿ ನಡುವೆ ನಡೆದ ಗಲಾಟೆಯಲ್ಲಿ ಪತ್ನಿ ಲಕ್ಷ್ಮಿ (52) ಅವರನ್ನು ಪತಿ ಭೀಮೇಶ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇಬ್ಬರೂ ಚಿಂದಿ ಆಯುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತಮಿಳುನಾಡಿನ ಲಕ್ಷ್ಮಿ ಹಾಗೂ ರಾಯಚೂರಿನ ಭೀಮೇಶ್ ಕೆಲಸದ ವೇಳೆ ಪರಿಚಯವಾಗಿ ಮದುವೆಯಾಗಿದ್ದರು. ಸಣ್ಣಪುಟ್ಟ ವಿಚಾರಗಳಿಗೆ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಭಾನುವಾರ ರಾತ್ರಿ ನಡೆದ ಜಗಳ ವಿಕೋಪಕ್ಕೆ ಹೋಗಿ ಪತಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗಲಾಟೆ ಗಮನಿಸಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧ ನಡೆಸುತ್ತಿದ್ದಾರೆ.

Share News

About BigTv News

Check Also

ಕುಂಕುಮ ಇಡಬೇಕಿದ್ದ ಭಾವಿ ಪತಿಯಿಂದಲೇ ಕೊಲೆ: ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ಬಾಲಕಿಯನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಗಲ್ಲು ಶಿಕ್ಷೆ

ಮಡಿಕೇರಿ: 16 ವರ್ಷದ ಅಪ್ರಾಪ್ತ ಬಾಲಕಿ ಮೀನಾ ಕೊಲೆ ಪ್ರಕರಣದಲ್ಲಿ ಆರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ (32)ಗೆ ಮಡಿಕೇರಿ ನ್ಯಾಯಾಲಯ …

Leave a Reply

Your email address will not be published. Required fields are marked *