ಬೆಂಗಳೂರು: KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಅಂಕಗಳ ಮಾಹಿತಿಯನ್ನು ಬಳಸಿಕೊಂಡು ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪವನ್ನು ED ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ವಿನೋದ್ ಕಟ್ಟಿ ಎಂಬ ಅಭ್ಯರ್ಥಿಗೆ ಆಯ್ಕೆ ಮಾಡಿಸುವುದಾಗಿ ಆರಿಫ್ ಮುಲ್ಲಾ ₹80 ಲಕ್ಷ ಬೇಡಿಕೆ ಇಟ್ಟಿದ್ದು, ₹1.98 ಲಕ್ಷವನ್ನು ಸಿಕಂದರ್ ಚೌಧರಿ ಖಾತೆಗೆ ವರ್ಗಾಯಿಸಲಾಗಿತ್ತು. ಬಳಿಕ ವಂಚಿಸಿದ್ದಾಗಿ ಸಿಕಂದರ್ ಒಪ್ಪಿಕೊಂಡಿರುವುದಾಗಿ ED ತಿಳಿಸಿದೆ. ಅಭ್ಯರ್ಥಿಗಳ ಅಂಕಗಳನ್ನು ಪಡೆದು ಆಯ್ಕೆಯ ಸಾಧ್ಯತೆ ಲೆಕ್ಕ ಹಾಕಿ ಹಣಕ್ಕೆ ಬೇಡಿಕೆ ಇಡಲಾಗುತ್ತಿತ್ತು. ಈ ಕುರಿತು ಆಗಿನ KPSC ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗ್ಯಾಂಗ್ವಾರ್ ಅವರ ಹೇಳಿಕೆಯನ್ನೂ ED ದಾಖಲಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
