Breaking News

KPSC ಕರ್ಮಕಾಂಡ: ಲಂಚದ ಹಣ ನೀಡಲು ನಕಲಿ ಖಾತೆಗಳ ಬಳಕೆ, ಹಲವು ಬ್ಯಾಂಕ್‌ಗಳೂ ಭಾಗಿ! ಇಡಿ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ

ಬೀದರ್: KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ ಬಸವರಾಜ್ ಕನ್ನಾಳೆ ಅವರಿಗೆ ಹಣಕಾಸಿನ ವ್ಯವಹಾರಗಳಲ್ಲಿ ಸಹಕರಿಸಿದ ಆರೋಪದ ಮೇಲೆ ಓಂ ಲಕ್ಷ್ಮೀ ಸಹಕಾರಿ ಸಂಘದ ಉಪಾಧ್ಯಕ್ಷ ಓಂಕಾರ್ ಕೆ. ಅವರ ಹೇಳಿಕೆ ED ತನಿಖೆಯಲ್ಲಿ ಮಹತ್ವ ಪಡೆದಿದೆ. ಕನ್ನಾಳೆ ಸೂಚನೆಯಂತೆ ಅಭ್ಯರ್ಥಿಗಳಿಂದ ಬಂದ ₹70 ಲಕ್ಷವನ್ನು ಸಂಘದ ICICI ಬ್ಯಾಂಕ್ ಖಾತೆಯಲ್ಲಿ ಸ್ವೀಕರಿಸಿ, 28 ನಕಲಿ ಖಾತೆಗಳ ಮೂಲಕ ಠೇವಣಿಗಳಂತೆ ತೋರಿಸಿದ್ದಾಗಿ ಓಂಕಾರ್ ಒಪ್ಪಿಕೊಂಡಿರುವುದಾಗಿ ED ತಿಳಿಸಿದೆ. ಅಲ್ಲದೆ, ಕನ್ನಾಳೆಯಿಂದ ₹7.10 ಕೋಟಿ ನಗದು ಪಡೆದು ಬಡ್ಡಿಗೆ ಸಾಲ ನೀಡಿದ್ದಾಗಿ ಹಾಗೂ ಸಾಲಕ್ಕೆ ಭದ್ರತೆಯಾಗಿ ವಿವಿಧ ಆಸ್ತಿಗಳನ್ನು ಕನ್ನಾಳೆ ಮತ್ತು ಸಂಬಂಧಿಕರ ಹೆಸರಿಗೆ ವರ್ಗಾಯಿಸಲಾಗಿತ್ತು ಎಂದು ED ತನಿಖಾ ದಾಖಲೆಗಳಲ್ಲಿ ಉಲ್ಲೇಖಿಸಿದೆ.

Share News

About BigTv News

Check Also

ಜಮೀನಿನ ಬಳಿ ಹೋಗಿದ್ದ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳಿಂದ ಬರ್ಬರ ಹತ್ಯೆ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಚಿಲ್ಕುಂದ ಗ್ರಾಮದಲ್ಲಿ ಶನಿವಾರ ಸಂಜೆ ಮಹಿಳೆಯೊಬ್ಬರನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ …

Leave a Reply

Your email address will not be published. Required fields are marked *