Breaking News

ಕುಂಕುಮ ಇಡಬೇಕಿದ್ದ ಭಾವಿ ಪತಿಯಿಂದಲೇ ಕೊಲೆ: ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ಬಾಲಕಿಯನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಗಲ್ಲು ಶಿಕ್ಷೆ

ಮಡಿಕೇರಿ: 16 ವರ್ಷದ ಅಪ್ರಾಪ್ತ ಬಾಲಕಿ ಮೀನಾ ಕೊಲೆ ಪ್ರಕರಣದಲ್ಲಿ ಆರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ (32)ಗೆ ಮಡಿಕೇರಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. 2024ರ ಮೇ 9ರಂದು ಕೊಡಗು ಜಿಲ್ಲೆಯ ಸೂರ್ಲಬ್ಬಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಮೀನಾಳ ನಿಶ್ಚಿತಾರ್ಥವನ್ನು ಅಪ್ರಾಪ್ತ ವಯಸ್ಸಿನ ಕಾರಣ ಅಧಿಕಾರಿಗಳು ಮುಂದೂಡಿದ್ದರು. ಇದರಿಂದ ಆಕ್ರೋಶಗೊಂಡ ಪ್ರಕಾಶ್, ಬಾಲಕಿಯ ಮನೆಗೆ ತೆರಳಿ ಪೋಷಕರ ಮೇಲೆ ಹಲ್ಲೆ ನಡೆಸಿ, ಮೀನಾಳನ್ನು ಮಚ್ಚಿನಿಂದ ಕೊಲೆ ಮಾಡಿ ರುಂಡದೊಂದಿಗೆ ಪರಾರಿಯಾಗಿದ್ದ. ಪ್ರಕರಣದ ವಿಚಾರಣೆಯಲ್ಲಿ ತಾಯಿ ಜಾನಕಿ ಅವರ ಸಾಕ್ಷ್ಯ ಪ್ರಮುಖವಾಗಿತ್ತು. ಮಡಿಕೇರಿಯ ಮೂರನೇ ಹೆಚ್ಚುವರಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಮರಣದಂಡನೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

Share News

About BigTv News

Check Also

ವಾಲಿಬಾಲ್‌ ಕೋಚ್‌ ನಿಂದಲೇ ಪೈಶಾಚಿಕ ಕೃತ್ಯ – ಹೈಸ್ಕೂಲ್‌ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ!

ಕೋಲಾರ: ಶಾಲೆಯೊಂದರಲ್ಲಿ ವಾಲಿಬಾಲ್ ಕೋಚ್ ಆಗಿದ್ದ ಶಶಿಕುಮಾರ್ ಎಂಬಾತ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ …

Leave a Reply

Your email address will not be published. Required fields are marked *