Breaking News

ಆಸ್ತಿ ಆಸೆಗೆ ರಕ್ತಸಂಬಂಧವೇ ಬಲಿ..! ಹಳೆ ಹುಬ್ಬಳ್ಳಿಯಲ್ಲಿ ಅನ್ವರ್ ಪಠಾಣ್ ಭೀಕರ ಹತ್ಯೆ.. ಅಣ್ಣ-ತಮ್ಮಂದಿರ ಕಲಹಕ್ಕೆ ರಕ್ತಪಾತದ ಅಂತ್ಯ..!

ಹಳೆ ಹುಬ್ಬಳ್ಳಿಯಲ್ಲಿ ಮರ್ಡರ್ ಮಿಸ್ಟರಿ..! ಆಸ್ತಿ ವಿವಾದದ ಬೆನ್ನಲ್ಲೇ ಅನ್ವರ್ ಪಠಾಣ್ ಹತ್ಯೆ, ಪೊಲೀಸರಿಂದ ತನಿಖೆ ಚುರುಕು..!

ಆಸ್ತಿ ವಿವಾದಕ್ಕೆ ರಕ್ತಸಿಕ್ತ ಅಂತ್ಯ..! ಹಳೆ ಹುಬ್ಬಳ್ಳಿಯಲ್ಲಿ ಅನ್ವರ್ ಪಟಾನ್ ಭೀಕರ ಹತ್ಯೆ..! ಅಣ್ಣ-ತಮ್ಮಂದಿರ ಕಲಹಕ್ಕೆ ಯುವಕ ಬಲಿ..! ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವಂತಹ ಭೀಕರ ಕೊಲೆ ಪ್ರಕರಣವೊಂದು ನಡೆದಿದೆ. ಆಸ್ತಿ ವಿಚಾರವಾಗಿ ಆರಂಭವಾದ ಕುಟುಂಬದ ಕಲಹ ಕೊನೆಗೆ ರಕ್ತಪಾತದಲ್ಲಿ ಅಂತ್ಯಗೊಂಡಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನ್ವರ್ ಪಠಾಣಎಂಬುವವರ ಹತ್ಯೆಯಾಗಿದೆ….

ಹೌದು ವೀಕ್ಷಕರೇ..! ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಹೊತ್ತಿಕೊಂಡ ವಿವಾದ ಯಾವ ಹಂತಕ್ಕೆ ತಲುಪಿದೆ ನೋಡಿ..! ಮಾತಿನ ಚಕಮಕಿಯಿಂದ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಭೀಕರ ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆಯಲ್ಲಿ ಅನ್ವರ್ ಪಟಾನ್ ಮೃತಪಟ್ಟಿದ್ದು, ಶಿರಾಜ್ ಎಂಬಾತನ ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ…

ಆಸ್ತಿ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತೇ? ಇದೇ ದ್ವೇಷ ಕೊಲೆಗೆ ಕಾರಣವಾಯಿತೇ? ಕುಟುಂಬದೊಳಗಿನ ವಿವಾದ ಕೊನೆಗೆ ಜೀವವನ್ನೇ ಬಲಿ ಪಡೆದಿದ್ದು ಹೇಗೆ? ಎಂಬ ಹಲವು ಪ್ರಶ್ನೆಗಳು ಇದೀಗ ಮೂಡಿವೆ…

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಡಿಸಿಪಿ ಶೃತಿ ಎನ್.ಎಸ್. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ…

ಇನ್ನು ಮೃತ ಅನ್ವರ್ ಪಠಾಣ ಅವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ….

ಅಷ್ಟಕ್ಕೂ ಆಸ್ತಿ ವಿಚಾರವಾಗಿ ನಡೆದ ಜಗಳವೇ ಈ ಭೀಕರ ಹತ್ಯೆಗೆ ಕಾರಣವಾಯಿತೇ? ಶಿರಾಜ್ ಪಾತ್ರವೇನು? ಘಟನೆಯ ಸಂದರ್ಭದಲ್ಲಿ ನಿಜವಾಗಿ ನಡೆದಿದ್ದೇನು? ಎಂಬುದಕ್ಕೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ….

ಒಟ್ಟಿನಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದಿರುವ ಈ ಭೀಕರ ಘಟನೆ ಹುಬ್ಬಳ್ಳಿಯಲ್ಲಿ ಆತಂಕ ಮೂಡಿಸಿದೆ. ರಕ್ತಸಂಬಂಧಗಳ ನಡುವಿನ ಕಲಹ ಕೊನೆಗೆ ಒಂದು ಜೀವವನ್ನೇ ಬಲಿ ಪಡೆದಿರುವುದು ದುರಂತವೇ ಸರಿ. ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಿದ್ದು, ಪೊಲೀಸರ ಮುಂದಿನ ತನಿಖೆ ಮಹತ್ವ ಪಡೆದುಕೊಂಡಿದೆ.

Share News

About Shaikh BigTv

Check Also

ಮನೆ ಖಾಲಿ ಮಾಡಲು ಒಪ್ಪದ ತಂಗಿಯ ಪ್ರಾಣ ತೆಗೆದ ಅಣ್ಣ;

ಬೆಂಗಳೂರು: ಶೀಟ್ ಮನೆ ಖಾಲಿ ಮಾಡುವ ವಿಚಾರವಾಗಿ ಉಂಟಾದ ಜಗಳದಲ್ಲಿ ವಕೀಲನೊಬ್ಬ ತನ್ನ ಸ್ವಂತ ತಂಗಿಯನ್ನೇ ಬ್ಯಾಟ್‌ನಿಂದ ಹೊಡೆದು ಕೊಲೆ …

Leave a Reply

Your email address will not be published. Required fields are marked *