ಮಂಗಳೂರು: ಆರ್‌ಟಿಒ ಇ-ಚಲನ್ ಹೆಸರಿನ ನಕಲಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ಯುವಕನ ಬ್ಯಾಂಕ್ ಖಾತೆಯಿಂದ ₹1 ಲಕ್ಷ ವರ್ಗಾವಣೆಯಾಗಿದೆ. ಈ ಸಂಬಂಧ ಬೆಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 15ರಂದು ಯುವಕನ ಸ್ನೇಹಿತನ ವಾಟ್ಸ್‌ಆಯಪ್ ಸಂಖ್ಯೆಯಿಂದ ಎಪಿಕೆ ಫೈಲ್ ಬಂದಿದ್ದು, ಸ್ನೇಹಿತನೇ ಕಳುಹಿಸಿದ್ದಾನೆಂದು ಭಾವಿಸಿ ಅದನ್ನು ಡೌನ್‌ಲೋಡ್ ಮಾಡಿದ್ದಾನೆ. ನವೆಂಬರ್ 18ರಂದು ಆತನ ಖಾತೆಯಿಂದ ತಲಾ ₹50 ಸಾವಿರದಂತೆ ಎರಡು ಬಾರಿ ಹಣ ಕಡಿತವಾಗಿದೆ. ನಕಲಿ ಫೈಲ್ ಮೂಲಕ ಬ್ಯಾಂಕ್ ಮಾಹಿತಿ ಕದ್ದು ಹಣ ವರ್ಗಾಯಿಸಿರುವ ಆರೋಪಿಗಳ ವಿರುದ್ಧ ಕ್ರಮಕ್ಕೆ ದೂರು ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
