Breaking News

ಮಟಮಟ ಮಧ್ಯಾಹ್ನವೇ ಬೆಚ್ಚಿಬಿದ್ದ ಬೆಂಗಳೂರು! ಲಾಡ್ಜ್‌ನಲ್ಲಿ ಕೇರಳದ ವಿದ್ಯಾರ್ಥಿನಿಯ ಭೀಕರ ಮರ್ಡರ್!

ಬೆಂಗಳೂರು: ಕೇರಳ ಮೂಲದ 22 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಗಂಗಾಳನ್ನು ಆಕೆಯ ಪ್ರಿಯತಮ ಗೋಕುಲ್ ಕೃಷ್ಣ ಬೆಂಗಳೂರಿನ ಕಾಟನ್‌ಪೇಟೆಯ ಲಾಡ್ಜ್‌ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ನಿನ್ನೆ ರಿಲೆನ್ಸಿ ಲಾಡ್ಜ್‌ನಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಮೊದಲೇ ಚಾಕು ಖರೀದಿಸಿ ತಂದಿದ್ದ ಗೋಕುಲ್ ಕೃಷ್ಣ ಗಂಗಾಳನ್ನು ಇರಿದು ಹತ್ಯೆ ಮಾಡಿದ್ದಾನೆ. ಘಟನೆ ಸಂಬಂಧ ಕಾಟನ್‌ಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಗೋಕುಲ್ ಕೃಷ್ಣನನ್ನು ಬಂಧಿಸಿದ್ದಾರೆ. ಪ್ರೇಮಿಗಳ ನಡುವಿನ ಜಗಳವೇ ಕೊಲೆಗೆ ಕಾರಣವೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

Share News

About BigTv News

Check Also

ಬೇರೆ ಜಾತಿಯ ಯುವತಿ ಮದುವೆ ವಿಚಾರಕ್ಕೆ ಮಗನ ಹತ್ಯೆಗೈದ ತಾಯಿ ಬಂಧನ: ಕೊಲೆಗೈದು ಗೊತ್ತಿಲ್ಲವೆಂದು ನಾಟಕವಾಡಿದ್ದ ಮಹಾತಾಯಿ!

ತುಮಕೂರು: ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಮಗನನ್ನು ತಾಯಿಯೇ ಮರದ ದಿಮ್ಮಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ …

Leave a Reply

Your email address will not be published. Required fields are marked *