Breaking News

ಪೆಟ್ರೋಲ್ ಬಂಕ್ ಬ್ಯುಸಿನೆಸ್ ಪಾರ್ಟ್‌ನರ್ಶಿಪ್ ಆಮಿಷ: ತುಮಕೂರಿನ ಕುಟುಂಬಕ್ಕೆ ₹1.5 ಕೋಟಿ ವಂಚನೆ, ಮೂವರ ಬಂಧನ

ತುಮಕೂರು: ಬೆಂಗಳೂರಿನ ಕೆಂಗೇರಿಯ ಪೆಟ್ರೋಲ್ ಬಂಕ್‌ನಲ್ಲಿ ಪಾಲುದಾರಿಕೆ ನೀಡುವುದಾಗಿ ನಂಬಿಸಿ ತುಮಕೂರಿನ ಪ್ರಭು ಎಂಬುವವರಿಗೆ ₹1.5 ಕೋಟಿ ಹಣ ಹಾಗೂ 100 ಗ್ರಾಂ ಚಿನ್ನ ಪಡೆದು ವಂಚಿಸಲಾಗಿದೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪ್ರತಿ ತಿಂಗಳು ಶೇ.30ರಷ್ಟು ಲಾಭ ನೀಡುವುದಾಗಿ ಆಮಿಷವೊಡ್ಡಿ ಆರೋಪಿಗಳು ಹಣ ಮತ್ತು ಚಿನ್ನ ಪಡೆದಿದ್ದರು. ಬಳಿಕ ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖೆಯಲ್ಲಿ ಇದೇ ಕುಟುಂಬ ಹಲವು ಜನರಿಗೆ ವಂಚಿಸಿರುವುದು ಬೆಳಕಿಗೆ ಬಂದಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬೇರೆ ಜಾತಿಯ ಯುವತಿ ಮದುವೆ ವಿಚಾರಕ್ಕೆ ಮಗನ ಹತ್ಯೆಗೈದ ತಾಯಿ ಬಂಧನ: ಕೊಲೆಗೈದು ಗೊತ್ತಿಲ್ಲವೆಂದು ನಾಟಕವಾಡಿದ್ದ ಮಹಾತಾಯಿ!

ತುಮಕೂರು: ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಮಗನನ್ನು ತಾಯಿಯೇ ಮರದ ದಿಮ್ಮಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ …

Leave a Reply

Your email address will not be published. Required fields are marked *