Breaking News

ಬ್ಯಾಟ್‌ನಿಂದ ತಂಗಿಯ ಕೊಲೆಗೈದು ಪರಾರಿಯಾಗಿದ್ದ ವಕೀಲ ಬಂಧನ

ಬೆಂಗಳೂರು: ಆಸ್ತಿ ವಿಚಾರಕ್ಕೆ ಸ್ವಂತ ತಂಗಿಯನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ್ದ ವಕೀಲ ಜಯರಾಮ್ (42) ಮತ್ತು ಆತನ ಕಾರು ಚಾಲಕ ಕೃಷ್ಣಮೂರ್ತಿ (34) ಅವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಜುನ್ನಸಂದ್ರದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿತ್ತು. ಅಣ್ಣ-ತಂಗಿಯ ನಡುವೆ ಆಸ್ತಿ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ತಾಯಿ ಜೊತೆ ವಾಸವಿದ್ದ ಮೀನಾಕ್ಷಿಗೆ ಮನೆ ಬಿಟ್ಟು ಹೋಗುವಂತೆ ಜಯರಾಮ್ ಒತ್ತಾಯಿಸುತ್ತಿದ್ದ. ತಂಗಿ ಆಸ್ತಿ ಪಡೆಯುತ್ತಾಳೆ ಎಂಬ ಅನುಮಾನದಿಂದ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಬುಧವಾರದ ಜಗಳ ವಿಕೋಪಕ್ಕೆ ತಿರುಗಿದಾಗ ಜಯರಾಮ್ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ತಂಗಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಚಾಲಕನೊಂದಿಗೆ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಗುಂಡು ಹಾರಿಸಿ ಯುವಕನ ಬರ್ಬರ ಹತ್ಯೆ

ಬೆಂಗಳೂರು: ಹೊಸಕೋಟೆ ಸಮೀಪದ ಸೋಲೂರಿನಲ್ಲಿ ಆಶ್ರಯ ಮನೆಗಳ ಜಮೀನು ಒತ್ತುವರಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಲಿಖಿತ್ ಗೌಡ (25) ಎಂಬ …

Leave a Reply

Your email address will not be published. Required fields are marked *