Breaking News

ಬೇರೆ ಜಾತಿಯ ಯುವತಿ ಮದುವೆ ವಿಚಾರಕ್ಕೆ ಮಗನ ಹತ್ಯೆಗೈದ ತಾಯಿ ಬಂಧನ: ಕೊಲೆಗೈದು ಗೊತ್ತಿಲ್ಲವೆಂದು ನಾಟಕವಾಡಿದ್ದ ಮಹಾತಾಯಿ!

ತುಮಕೂರು: ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಮಗನನ್ನು ತಾಯಿಯೇ ಮರದ ದಿಮ್ಮಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಜಕ್ಕೇನಹಳ್ಳಿಯಲ್ಲಿ ನಡೆದಿದೆ. ಮುತ್ತುರಾಜ್ (35) ಕೊಲೆಯಾದ ಯುವಕನಾಗಿದ್ದು, ತಾಯಿ ಶಿವಮ್ಮ (55) ಆರೋಪಿ. ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಾಯಿ ಮತ್ತು ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಘಟನೆಯ ಹಿಂದಿನ ರಾತ್ರಿ ಕೂಡ ಗಲಾಟೆ ನಡೆದಿದ್ದು, ಮಗ ವರಾಂಡದಲ್ಲಿ ಮಲಗಿದ್ದ ವೇಳೆ ಶಿವಮ್ಮ ಮರದ ದಿಮ್ಮಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಅಪರಿಚಿತರು ಹತ್ಯೆ ಮಾಡಿದ್ದಾರೆ ಎಂದು ನಾಟಕವಾಡಿದ್ದ ತಾಯಿಯನ್ನು ಸಿಸಿಟಿವಿ ದೃಶ್ಯ ಹಾಗೂ ಸಾಕ್ಷ್ಯಾಧಾರಗಳ ಮೂಲಕ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ಗುಂಡು ಹಾರಿಸಿ ಯುವಕನ ಬರ್ಬರ ಹತ್ಯೆ

ಬೆಂಗಳೂರು: ಹೊಸಕೋಟೆ ಸಮೀಪದ ಸೋಲೂರಿನಲ್ಲಿ ಆಶ್ರಯ ಮನೆಗಳ ಜಮೀನು ಒತ್ತುವರಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಲಿಖಿತ್ ಗೌಡ (25) ಎಂಬ …

Leave a Reply

Your email address will not be published. Required fields are marked *