ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಸಂಸದ ಮುನಿಸ್ವಾಮಿಯವರು ಕೋಲಾರದಲ್ಲಿ ಸ್ವಚ್ಚತಾ ಬಗ್ಗೆನಗರ ಪ್ರದಕ್ಷಿಣೆ ಮಾಡಿದ್ದಾರೆ. ಬೆಳ್ಳಂಬೆಳ್ಳೆಗ್ಗೆಯೆ ಪೌರ ಕಾರ್ಮಿಕರ ಕಾರ್ಯವೈಕರಿ, ಕಸದ ಸಮಸ್ಯೆಯನ್ನ ವೀಕ್ಷಿಸಿದರು. ಕೋಲಾರ ನಗರಸಭೆಯಲ್ಲಿ 228 ಹೊರಗುತ್ತಿಗೆ ಹಾಗೂ ಖಾಯಂ ಪೌರ ಕಾರ್ಮಿಕರು ಇದ್ದು, ಅವರ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಪೌರ ಕಾರ್ಮಿಕರು ನಗರಸಭೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಇದೇ ವೇಳೆ ಸಂಸದರು ಕಾರ್ಮಿಕರನ್ನು ದಬಾಯಿಸಿದರೇ ಪರಿಣಾಮ ನೆಟ್ಟಗಿರುವುದಿಲ್ಲ, ಸೌಜನ್ಯದಿಂದ ವರ್ತಿಸಲು ತಾಕೀತು ಮಾಡಿದರು. ತಿಂಗಳು ತಿಂಗಳು ವೇತನ ಪಾವತಿಯಾಗದ ಕುರಿತು ಆಯುಕ್ತ, ಆರೋಗ್ಯ ನಿರೀಕ್ಷರನ್ನ ತರಾಟೆಗೆ ತೆಗೆದುಕೊಂಡರು. ಡಿಸಿ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದು, ಕಸ ವಿಲೇವಾರಿಗೆ ೧೦ ಎಕರೆ ಜಾಗ ಮಂಜೂರು ಮಾಡುವಂತೆ ಸೂಚಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





