Breaking News

ಲಾರಿಗೆ ಅಪರಿಚಿತ ವಾಹನ‌ ಡಿಕ್ಕಿ‌: ಲಾರಿ‌ ಚಾಲಕ ಸಾವು

‌

ಹುಬ್ಬಳ್ಳಿ: ನಗರದ ಹೊರವಲಯದ ಬೈಪಾಸ್ ನಲ್ಲಿ ಚಲಿಸುತ್ತಿದ್ದ ಲಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದ್ದು, ಚಾಲಕ ಕುಳಿತ ಜಾಗದಲ್ಲಿಯೇ ಸಾವಿಗೀಡಾಗಿದ್ದಾನೆ.

ಆಂದ್ರಪ್ರದೇಶ ಮೂಲದ ಲಾರಿಯೂ ಕಟ್ಟಿಗೆಯನ್ನ ಹೇರಿಕೊಂಡು ದಾಂಡೇಲಿಯತ್ತ ಹೋಗುವ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು, ಯಾವ ಸಮಯದಲ್ಲಿ ಅಪಘಾತ ಸಂಭವಿಸಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಬೇಕಿದೆ.

ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಈಗ ಪರಿಶೀಲನೆಗೆ ಮುಂದಾಗಿದ್ದಾರೆ. ಚಾಲಕನ ಶವ ಇನ್ನೂ ಲಾರಿಯಲ್ಲಿದ್ದು, ಮೃತ ದೇಹವನ್ನು ಕಿಮ್ಸಗೆ ರವಾನೆ ಮಾಡುತ್ತಿದ್ದಾರೆ.

ಬೆಳಿಗ್ಗೆ ಮಂಜು ಕವಿದ ಸಮಯದಲ್ಲಿ ದುರ್ಘಟನೆ ನಡೆದಿದೆ ಎಂಬ ಶಂಕೆಯಿದ್ದು, ಪರಾರಿಯಾಗಿರುವ ವಾಹನದ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

Share News

About admin

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *