Breaking News

ಯೋಗಗುರು ಗೋ ಪಶುಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು

ವಿಶ್ವ ಯೋಗ ದಿನದ ಅಂಗವಾಗಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಯೋಗಗುರು ಗೋ ಪಶುಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು ನಡೆಸಲಾಗಿದ್ದು,.ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಜೂನ್ 21ರಂದು ವಿಶ್ವಯೋಗ ದಿನದ ಅಂಗವಾಗಿ ವೇದಬ್ರಹ್ಮ ಯೋಗಪಟು ಶ್ರೀ ಗೋಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು ನಡೆಯಿತು.ಜೂನ್ 21ರಂದು ವಿಶ್ವ ಯೋಗದಿನದ ಅಂಗವಾಗಿ 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಾಲೂಕು ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗಪ್ರದರ್ಶನ ನೀಡಲಿದ್ದಾರೆ…ಶಿಕ್ಷಣ ತಜ್ಞ ಡಾ.ಕೆ.ಕಾಳೇಗೌಡ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಪ್ರಗತಿಪರ ಚಿಂತಕರಾದ ಡಾ. ಕಾಡುಮೆಣಸ ಚಂದ್ರು, ದೈಹಿಕ ಶಿಕ್ಷಕರಾದ ಕುಮಾರ್ ಮತ್ತು ಯೋಗ ತರಬೇತುದಾರ ಪ್ರಕಾಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಯೋಗಾಭ್ಯಾಸ ತಯಾರಿಯ ಸಿದ್ಧತೆಯಲ್ಲಿ ಭಾಗವಹಿಸಿದ್ದರು.

Share News

About admin

Check Also

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ …

Leave a Reply

Your email address will not be published. Required fields are marked *