Breaking News

ಆಕಸ್ಮಿಕ ಬೆಂಕಿಗೆ ಕೃಷಿ ಕೂಲಿ ಕಾರ್ಮಿಕ ಸಾವು

ಮಂಡ್ಯ ಜಿಲ್ಲೆ ಕಿಕ್ಕೇರಿ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ರಾಮ ಬಿನ್ ಲೇಟ್.ಪುಟ್ಟೇಗೌಡ(48) ರೈತಾಪಿ ಕೆಲಸ ಮಾಡಿಕೊಂಡಿದ್ದು ಮಂಗಳೂರು ಹೆಂಚಿನ ಮನೆಯ ಸ್ನಾನದ ಕೊಠಡಿಯಲ್ಲಿ ಒಣ ಹುಲ್ಲನ್ನು ಶೇಖರಣೆ ಮಾಡಿದ್ದು, ಇದನ್ನು ಜಾನುವಾರುಗಳಿಗೆ ಹಾಕಲು ಹೋದಾಗ ಮನೆಗೆ ಕರೆಂಟ್ ಡಿಸ್ ಕನೆಕ್ಟ್ ಮಾಡಿದ್ದರಿಂದ ದೀಪ ಹಚ್ಚಲು ಹೋದಾಗ ಆಕಸ್ಮಿಕವಾಗಿ ಬೆಂಕಿ ಒಣ ಹುಲ್ಲಿಗೆ ತಗುಲಿ ತಕ್ಷಣ ಬೆಂಕಿ ಆವರಿಸಿಕೊಂಡಿದೆ. ಈತ ಇದೇ ಕೊಠಡಿ ಯಿಂದ ಹೊರಬರಲು ದಿಕ್ಕು ತೋಚದಂತಾಗಿ ಹೊಗೆಯಿಂದ ಉಸಿರು ಕಟ್ಟಿ ಮೃತ ಪಟ್ಟಿದ್ದಾರೆ..ದೇಹದಲ್ಲಿ ಸಂಪೂರ್ಣವಾಗಿ ಸುಟ್ಟ ಗಾಯಗಳಾಗಿರುತ್ತವೆ, ಮನೆಯ ಅರ್ಧ ಭಾಗ ಸಹ ಸುಟ್ಟು ಹೋಗಿರುತ್ತದೆ,ಈ ಘಟನೆಯು ಮದ್ಯ ರಾತ್ರಿ ಸುಮಾರು 12ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಅಗ್ನಿ ಶಾಮಕ ದಳ ಬಂದು ಬೆಂಕಿ ನಂದಿಸಿದ್ದು, ಕೆ.ಆರ್.ಪೇಟೆ ಟೌನ್ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್ ಹಾಗೂ ಕಿಕ್ಕೇರಿ ಪೊಲೀಸ್ ಠಾಣೆ ಸಿಬ್ಬಂಧಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಮೃತ ರಾಮ ಅವರ ಮೃತ ದೇಹವನ್ನು ಕೆ.ಆರ್.ಪೇಟೆಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸ ಲಾಗಿದೆ. ಮೃತರ ಕುಟುಂಬ ಸದಸ್ಯರ ಆಕ್ರಂದನವು ಮುಗಿಲು ಮುಟ್ಟಿತ್ತು.

Share News

About admin

Check Also

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ …

Leave a Reply

Your email address will not be published. Required fields are marked *