Breaking News

ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ!!

ಪತ್ನಿ ಲಕ್ಷ್ಮೀ, ಅತ್ತೆ ಶ್ರುತಿ ಇಬ್ಬರನ್ನು ಮತಾತಂತರವಾಗುವಂತೆ ಪತಿ ಶ್ರೀಕಾಂತ್ ಸೇರಿ ಹಲವರು ಬಲವಂತ ಮಾಡುತ್ತಿದ್ದರು. ಒಪ್ಪದಿದ್ದಾಗ ಹಲ್ಲೆ ನಡೆಸಲಾಗಿದೆ. ಪತಿ ಶ್ರೀಕಾಂತ್ ಪತ್ನಿ ಹಾಗೂ ಅತ್ತೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದಕ್ಕೆ ಪತ್ನಿ ಹಾಗೂ ಅತ್ತೆ ನಿರಾಕರಿಸಿದಾಗ ಶ್ರೀಕಾಂತ್ ಹಾಗೂ ಆತನ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಲಕ್ಷ್ಮೀ ಸಹೋದರ ನೀಡಿದ ದೂರುನ ಹಿನ್ನೆಲೆಯಲ್ಲಿ ಪತಿ ಶ್ರೀಕಾಂತ್ ಹಾಗೂ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಪ್ರಕರಣ ಸಂಬಂಧ ಪತಿ ಶ್ರೀಕಾಂತ್ ಸೇರಿದಂತೆ 9 ಜನರ ವಿರುದ್ಧ ಶ್ರೀರಂಗಪಟ್ಟಣ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *