ಶ್ರೀನಗರ:ದಕ್ಷಿಣ ಕಾಶ್ಮೀರದ ಬಿಜ್‌ಬಿಹಾರಾ ಪ್ರದೇಶದಲ್ಲಿ ಅಡಗಿದ್ದ ಭಟ್ ಹಾಗೂ ಆತನ ಸಹಚರ ತೌಸೀಫ್ ಭಟ್ ಅಡಗಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಯೋಧರು ಇಬ್ಬರನ್ನೂ ಬಲಿ ಪಡೆದಿದ್ದಾರೆ. ಫೆ.14ರಂದು ಸಿಆರ್‌ಪಿಎಫ್ ಯೋಧರನ್ನು ಗುರಿಯಾಗಿಸಿ ಹೆದ್ದಾರಿಯಲ್ಲಿ ಬಾಂಬ್ ತುಂಬಿದ್ದ ಕಾರನ್ನು ಅಪ್ಪಳಿಸಿ ಉಗ್ರರು ನಡೆಸಿದ್ದ ದಾಳಿಯ ಸಂಚುಕೋರ ಹಾಗೂ ಕೃತ್ಯಕ್ಕೆ ಕಾರು ನೀಡಿದ್ದ ಉಗ್ರ ಸಜ್ಜದ್ ಭಟ್‌ನನ್ನು ಭದ್ರತಾ ಪಡೆಗಳು ಮಂಗಳವಾರ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿವೆ. ದಕ್ಷಿಣ ಕಾಶ್ಮೀರದ ಬಿಜ್‌ಬಿಹಾರಾ ಪ್ರದೇಶದಲ್ಲಿ ಅಡಗಿದ್ದ ಭಟ್ ಹಾಗೂ ಆತನ ಸಹಚರ ತೌಸೀಫ್ ಭಟ್ ಅಡಗಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಯೋಧರು ಇಬ್ಬರನ್ನೂ ಬಲಿ ಪಡೆದಿದ್ದಾರೆ. ಮೃತ ಉಗ್ರರಿಬ್ಬರೂ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರು. ಅನಂತ್‌ನಾಗ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಭದ್ರತಾ ಪಡೆಗಳು ನಾಲ್ವರು ಜೈಷೆ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ 10 ಯೋಧರು ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದಾರೆ. ಸೋಮವಾರ ಮತ್ತು ಮಂಗಳವಾರ ಕೇವಲ 24 ಗಂಟೆ ಅವಧಿಯಲ್ಲಿ ಉಗ್ರರು ನಾಲ್ಕು ಕಡೆ ದಾಳಿ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





