Breaking News

ನಾಡಪ್ರಭು ಕೆಂಪೇಗೌಡರ 510ನೇ ಜನ್ಮದಿನಾಚರಣೆ ಆಚರಣೆ…

ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್. ಪೇಟೆ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ ಘಟಕದ ಸಿಬ್ಬಂಧಿಗಳಿಂದ ನಾಡಪ್ರಭು ಕೆಂಪೇಗೌಡರ 510ನೇ ಜನ್ಮದಿನಾಚರಣೆ ಆಚರಣೆ ಮಾಡಲಾಯಿತು. ಸಾರ್ವಜನಿಕರಿಗೆ ಸಾಮೂಹಿಕ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿದ್ದು, ಕೆಂಪೇಗೌಡರ ಗುಣಗಾನ ಮಾಡಿದ ಬಸ್ ಡಿಪೋ ವ್ಯವಸ್ಥಾಪಕ ಶಿವಕುಮಾರ್, ಜಾತ್ಯಾತೀತ, ಜನಪರವಾದ ಆಡಳಿತ ನೀಡಿ ದೂರದರ್ಶಿ ವ್ಯಕ್ತಿತ್ವವನ್ನು ಹೊಂದಿದ್ದ ಕೆಂಪೇಗೌಡರು ಧರ್ಮಪ್ರಭುಗಳಾಗಿ ದಕ್ಷ ಆಡಳಿತ ನೀಡಿ ಬೆಂಗಳೂರು ಮಹಾನಗರವನ್ನು ನಿರ್ಮಾಣ ಮಾಡಿ ಇತಿಹಾಸದ ಪುಟಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಕೊಂಡಾಡಿದರು. ಚಾಲಕರು ಮತ್ತು ನಿರ್ವಾಹಕರು, ಸಿಬ್ಬಂಧಿಗಳು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share News

About admin

Check Also

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ …

Leave a Reply

Your email address will not be published. Required fields are marked *