Breaking News

ಬಿಪಿಎಲ್ ಕುಟುಂಬಗಳಿಗೆ ಸರ್ಕಾರ ಕೊಡುಗೆ: ಸಿಟಿ ಸ್ಕ್ಯಾನ್, ಎಂ ಆರ್ ಐ ಸ್ಕ್ಯಾನ್ ಉಚಿತ

ಬೆಂಗಳೂರು: ಬಿಪಿಎಲ್ ಕುಟುಂಬಗಳು ಇನ್ಮುಂದೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್​ಐ ಸ್ಕ್ಯಾನಿಂಗ್​ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಬಡವರು ಈ ಸೇವೆಗೆ ದುಬಾರಿ ವೆಚ್ಚ ಭರಿಸಬೇಕಿತ್ತು. ಹೀಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ ಸಿಟಿ ಮತ್ತು ಎಂಆರ್​ಐ ಸ್ಕ್ಯಾನ್​ಗಳನ್ನು ಉಚಿತವಾಗಿಸಲು ನಿರ್ಣಯಿಸಲಾಗಿದೆ. ರೋಗಿಗಳು ಅನಗತ್ಯವಾಗಿ ಸ್ಕ್ಯಾನ್​ಗೆ ಒಳಪಡುವುದನ್ನು ತಪ್ಪಿಸಲು, ಯೋಜನೆ ನಿಜವಾದ ಫಲಾನುಭವಿಯನ್ನು ತಲುಪುವುದನ್ನು ಖಚಿತಪಡಿಸಲು ಪಿಹೆಚ್​ಹೆಚ್ ಫಲಾನುಭವಿಗಳಿಗೆ ಉಚಿತವಾಗಿ ಹಾಗೂ ಇತರರಿಗೆ ಶೇ.70 ವಿಧಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಬಿಪಿಎಲ್ ಕಾರ್ಡದಾರರಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಅಂಗಾಂಗ ಕಸಿ (ಜೀವಸಾರ್ಥಕಥೆ) ಯೋಜನೆಯಲ್ಲಿ ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಶ ಮತ್ತು ಮೂಳೆ ಮಜ್ಜೆಯ ಕಸಿಯನ್ನು ಸೇರಿಸಿ ಅಸ್ತಿತ್ವದಲ್ಲಿರುವ ಅಂಗಾಂಗ ಕಸಿ ಯೋಜನೆ ವಿಸ್ತರಿಸುವುದು. ಆ ಮೂಲಕ ಕಸಿ ವಿಧಾನದ ದರಗಳಂತೆ ಇಮ್ಯುನೋ ಸಪ್ರೆಶನ್ ಔಷಧ ಕೊಡಲು ಹಾಗೂ ಆಟೋಲೋಗಸ್ ಮೂಳೆ ಮಜ್ಜೆಯ ಕಸಿ ಕೈಗೊಳ್ಳಲು ಸಂಪುಟ ಒಪ್ಪಿಗೆ ಸೂಚಿಸಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *