ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್ ನಲ್ಲಿ ಗೆಲುವಿನ ಕುದುರೆ ಏರಿ ಮುನ್ನುಗ್ಗುತ್ತಿರುವ ಬ್ಲೂ ಬಾಯ್ಸ್ ಗೆ ಇಂದು ವೆಸ್ಟ್ ಇಂಡೀಸ್ ಎದುರಾಗಲಿದೆ. ಮ್ಯಾಂಚೇಸ್ಟರ್ ನಲ್ಲಿ ಪಂದ್ಯ ನಡೆಯಲಿದ್ದು ಭಾರೀ ಜಿದ್ದಾಜಿದ್ದಿ ನಿರೀಕ್ಷಿಸಲಾಗಿದೆ. ಎರಡು ತಂಡಗಳು ಸ್ಫೋಟಕ ಆಟಗಾರರೇ ಇದ್ದು ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಯಲಿದೆ. ಸ್ಫೋಟಕ ಬ್ಯಾಟ್ಸ್‍ಮನ್ ವಿಂಡೀಸ್ ದೈತ್ಯ ಕ್ರಿಸ್ ಗೇಲ್‍ಗೆ ಈ ವಿಶ್ವಕಪ್ ಕೊನೆಯದಾಗಿದ್ದು, ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.ಉಭಯ ತಂಡಗಳು ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ವೇಗಿ ಭುವನೇಶ್ವರ್ ಇನ್ನು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲೂ ಮೊಹಮದ್ ಶಮಿ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲೂ ಶಮಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ವಿಂಡೀಸ್ ಬೌಲಿಂಗ್ ಬಲಿಷ್ಠವಾಗಿದ್ದು, ಟೀಂ ಇಂಡಿಯಾ ಬ್ಯಾಟ್ಸ್‍ಮನ್‍ಗಳು ರಣತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳಲ್ಲಿ 4 ರಲ್ಲಿ ಸೋಲುಂಡಿರುವ ವಿಂಡೀಸ್ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಇತ್ತ ಸೆಮಿಫೈನಲ್ ಹೊಸ್ತಿಲಲ್ಲಿರುವ ಕೊಹ್ಲಿ ಸೈನ್ಯ, ಇಂದಿನ ಪಂದ್ಯದಲ್ಲಿ ಗೆದ್ದು ತನ್ನ ಸ್ಥಾನಗಟ್ಟಿಮಾಡಿಕೊಳ್ಳಲು ತಂತ್ರ ರೂಪಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





