Breaking News

ಕುಸ್ತಿ ಕರಾಮತ್ತಿಗೆ ನಿಬ್ಬೆರಗಾದ ಸಿಟಿ ಜನರು

ಚಿಕ್ಕೋಡಿ ; ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಗ್ರಾಮೀಣ ಕ್ರೀಡೆ ಎಂದೇ ಗುರುತಿಸಲಾದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜ ಮಹರಾಜರ ಕಾಲದಿಂದ ಬಳುವಳಿ ಆಗಿ ಬಂದಿರುವ ಅಪರೂಪದ ದೇಶಿ ಕಲೆ ನಶಿಸಿ ಹೋಗುತ್ತಿರುವ ಕಾಲದಲ್ಲಿ ಕುಸ್ತಿಯನ್ನು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿ ಅಭಿವೃದ್ಧಿ ಪಡಿಸುತ್ತಿರುವದರಲ್ಲಿ ಕರ್ನಾಟಕದ ಪಾಲು ಕೂಡ ಮಹತ್ವದ್ದಾಗಿದ್ದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಮೂಲಕ ಅಥಣಿ ಪಟ್ಟಣ ತನ್ನದೆ ಆದ ಕೊಡುಗೆಯನ್ನು ಕೊಟ್ಟಿದೆ. ಶ್ರೀ ದಡ್ಡಿ ಸಿದ್ದೇಶ್ವರ ಜಾತ್ರೆಯ ನಿಮಿತ್ತವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳನ್ನು ಅಥಣಿ ಪಟ್ಟಣದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕುಸ್ತಿ ಪಂದ್ಯಾವಳಿಯಲ್ಲಿ ಪೈಲ್ವಾನರಾದ ಕಾರ್ತಿಕ ಕಾಟೆ,ಆನಂದ ಲಮಾಣಿ,ಬೀರಪ್ಪ ಅಥಣಿ, ವಿಕ್ರಮ ದಿಲ್ಲಿ,ಸಂದೀಪ ಕಾಶಿದ,ಅಬುಬಕರ ಮಾಸಾಳ,ವಿಕಾಸ ಪಾಟೀಲ, ತುಕಾರಾಂ ಅಥಣಿ, ಅಮಗೊಂಡ ಮಖಣಾಪೂರ, ಹೊಳೆಬಸು ಹೆಬ್ಬಾಳ, ಬಸು ಮಸರಗುಪ್ಪಿ,ಅಮೂಲ ದೇವಖಾತೆ,ಅಮೀತ ದಿಲ್ಲಿ,ಹಾಗೂ ಪ್ರವೀಣ ಸಾಂಗಲಿ ಭಾಗವಹಿಸಿದ್ದು ಪಂದ್ಯಾವಳಿಯ ವೇಳೆ ತಮ್ಮ ಪಟ್ಟುಗಳನ್ನು ಪ್ರದರ್ಶಿಸಿ ನೋಡುಗರ ಮನರಂಜಿಸಿದರು. ಕುಸ್ತಿ ಪಂದ್ಯಾವಳಿಯ ಆಯೊಜನೆಯನ್ನು ದಡ್ಡಿ ಸಿದ್ದೇಶ್ವರ ಜಾತ್ರಾ ಕಮೀಟಿಯ ಅಧ್ಯಕ್ಷ ಕಲ್ಲಪ್ಪಾ ಮೆತ್ರಿ ಮತ್ತು ಸದಸ್ಯರು ಮಾಡಿದ್ದರು. ಒಟ್ಟಾರೆ ಆಗಿ ದೇಶಿ ಕ್ರಿಡೆಯಾದ ಕುಸ್ತಿ ಪಂದ್ಯಾವಳಿ ಮೈ ನವಿರೇಳಿಸುವಂತೆ ನಡೆದಿದ್ದು ನೋಡುಗರು ಕುಸ್ತಿ ಪಂದ್ಯವನ್ನು ಕಣ್ಣು ತುಂಬಿಕೊಂಡು ಗೆದ್ದ ಪೈಲ್ವಾನರ ಜೊತೆ ಪೋಟೊ ತೆಗೆದುಕೊಳ್ಳಲು ಮುಂದಾಗುತ್ತಿರುವದು ಹೆಚ್ಚುತ್ತಿರುವ ಕುಸ್ತಿಯ ಜನಪ್ರೀಯತೆಗೆ ಸಾಕ್ಷಿ ಆಗಿತ್ತು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *